ಪ್ರತಿ ವರ್ಷ ನಟಿ ರಮ್ಯಾ ರವರ ಹುಟ್ಟುಹಬ್ಬವನ್ನ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿ ಹಾಗೂ ಅನಾಥ ಮಕ್ಕಳೊಂದಿಗೆ ಹುಟ್ಟುಹಬ್ಬ ವನ್ನ ಆಚರಿಸುತ್ತಿದ್ದ ಅಭಿಮಾನಿಗಳು ..

ಕನ್ನಡ ಚಿತ್ರರಂಗದ ಹಲವಾರು ನಟ ನಟಿಯರು ಅವರಿಗೆ ಶುಭ ಹಾರೈಸಿದರು ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಫ್ಯಾನ್ ಅಸೋಸಿಯೇಷನ್ ಅಧ್ಯಕ್ಷ ಭರತ್ ಎಸ್ ಎನ್ ಮತ್ತು ಉಪಾಧ್ಯಕ್ಷ ಪ್ರೇಮ್ ಸಾಗರ್ ಅವರ ತಂಡ ಈ ವರ್ಷ ಮಲ್ಲೇಶ್ವರಂ ನ ಮಹಾಗಣಪತಿ ದೇವಸ್ಥಾನದಲ್ಲಿ ರಮ್ಯ ಅವರ ಹೆಸರಿನಲ್ಲಿ ಪೂಜೆ ಸಲ್ಲಿಸಿದರು ಹಾಗು ನೆಮ್ಮದಿ ಮನೆ ಫೌಂಡೇಶನ್ ನ ಮಕ್ಕಳ ನಡುವೆ ತಾವು ಮಕ್ಕಳಾಗಿ ಮಕ್ಕಳಿಗೆ ಅನ್ನದಾನ ಮಾಡಿ, ಕೇಕ್ ಕತ್ತರಿಸಿ ಸ್ಪೂರ್ತಿದಾಯಕವಾಗಿ ಹುಟ್ಟು ಹಬ್ಬದ ಆಚರಣೆಯನ್ನು ಮಾಡಿದರು

ಹೀಗೆ ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬವನ್ನು ಪ್ರತಿ ವರ್ಷ ನೇರವೆರಿಸಿಕೊಂಡು ಬರುತ್ತಿದ್ದಾರೆ

ಇದೇ ರೀತಿ ಮುಂದೆಯೂ ಸಹ ಸಮಾಜಮುಖಿ ಕಾರ್ಯಗಳಲ್ಲಿ ಸಿನಿಮಾ ಕ್ಷೇತ್ರದ ಚಟುವಟಿಕೆಗಳನ್ನು ರಮ್ಯ ಫ್ಯಾನ್ ಅಸೋಸಿಯೇಷನ್ ಅವರ ತಂಡ ನಡೆಸಿಕೊಂಡು ಬರುವ ಭರವಸೆಯನ್ನು ಹೊಂದಿದ್ದಾರೆ