ರಾಜಕುಮಾರನ ಹೊಸ ದಂಡಯಾತ್ರೆಗೆ ದಿನ ಫಿಕ್ಸ್ ಆಯ್ತು! ಅಭಿಮಾನಿಗಳ ಸಂತಸಕ್ಕೆ ಮಿತಿಇಲ್ಲದಾಯ್ತು! ಈ ತಿಂಗಳ 21 ಕ್ಕೆ ಪುನೀತ್ ರಾಜ್ ಕುಮಾರ್ ಅಭಿನಯದ ಹೊಸ ಚಿತ್ರ ತೆರೆಗೆ ಬರುತ್ತಿದೆ, ರಾಜಕುಮಾರ ಎಲ್ಲಾ ರೀತಿಯಲ್ಲೂ ಗೆಲುವು ಸಾಧಿಸಿದ್ದು ಇಂದು ಇತಿಹಾಸ! ಸಹಜವಾಗಿಯೇ ನಿರೀಕ್ಷೆಗಳು ಹೆಚ್ಚಿವೆ. ಆದರೆ ಇದು ಪಕ್ಕಾ ಕಮರ್ಷಿಯಲ್ ಚಿತ್ರ. ತಮಿಳಿನ ‘ ಪೂಜೈ ‘ ನ ರಿಮೇಕ್ ಮೂವಿ ಆದರೂ ಜನ ಹೆಚ್ಚು ಕುತೂಹಲದಲ್ಲಿದ್ದಾರೆ, ಪಕ್ಕಾ ಆ್ಯಕ್ಷನ್ ಚಿತ್ರದಲ್ಲಿ ಅಪ್ಪು ವೀರಾವೇಶ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಹರ್ಷಾ ನಿರ್ದೇಶನದ , M N ಕುಮಾರ್ ನಿರ್ಮಾಣದಲ್ಲಿ, ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮೂಡಿಬರುತ್ತಿದೆ ಅಂಜನೀಪುತ್ರ, ರವಿ ಬಸ್ರೂರ್ ಸಂಗೀತನಿರ್ದೇಶನದ ಹಾಡುಗಳು ಈಗಾಗಲೇ ಜನಪ್ರಿಯಗೊಂಡಿದ್ದು ಈ ಹಾಡುಗಳು ಪುನೀತ್ ರಾಜ್ ಕುಮಾರ್ ಅವರ ಮಾಲೀಕತ್ವದ ಪಿ ಆರ್ ಕೆ ಆಡಿಯೋ ಸಂಸ್ಥೆ ಯಿಂದ ಲೋಕಾರ್ಪಣೆಯಾಗಿರುವುದು ಇನ್ನೂ ಹೆಚ್ಚು ನಿರೀಕ್ಷೆಗಳನ್ನು ಹುಟ್ಟಿಸಿದೆ. ರವಿಶಂಕರ್, ರಮ್ಯಾಕೃಷ್ಣ , ಸಾಧುಕೋಕಿಲ, ಚಿಕ್ಕಣ್ಣ, ಮುಖೇಶ್ ಮುಖ್ಯ ಭೂಮಿಕೆಯಲ್ಲಿದ್ದೂ ಹರಿಪ್ರಿಯ ಒಂದು ಹಾಡಿಗೆ ಹೆಜ್ಜೆ ಹಾಕಿದ್ದು ರೋಮಾಚನ ನೀಡಲಿದ್ದಾರೆ, ಸ್ವಾಮಿ ಅವರ ಕ್ಯಾಮರಾ ಕೈಚಳಕದಲ್ಲಿ, ದೀಪು ಅವರ ಸಂಕಲನದಲ್ಲಿ ಮೂಡಿಬರುತ್ತಿರುವ ಸಿನಿಮಾ ಅಭಿಮಾನಿಗಳಿಗೆ ರಸದೌತಣ ನೀಡಲಿದೆ‌.

ಸಿನಿಮಾ ತೆರೆಕಂಡು , ನಮ್ಮ ರಾಜಕುಮಾರ ಮತ್ತೆ ಮೋಡಿಮಾಡಲಿದ್ದಾರೆ, ಅದಾಕ್ಕಾಗಿ ಎಲ್ಲರೂ ಕಾಯಲೇಬೇಕು, ಅಂಜನೀಪುತ್ರ ಎಲ್ಲರ ನಿರೀಕ್ಷೆ ಪೂರ್ಣಗೊಳಿಸಲಿ , ಆಂಜನೇಯನ ಆಶೀರ್ವಾದ ಸಿನಿಮಾದ ಮೇಲಿರಲಿ ಎಂಬುದೇ ನಮ್ಮ ಆಶಯ.

Leave a Reply