ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರಗಳು 2019 ರ ಹೊಸ ವರ್ಷದ ಸಂಭ್ರಮಾಚರಣೆ ಕನ್ನಡ ಚಿತ್ರರಂಗದ ಕಾಣಿಕೆಯಂತಿದೆ

ಕವಚ ಶಿವರಾಜ್ ಕುಮಾರ್ ಅವರು ನಟಿಸಿರುವ ಈ ಚಿತ್ರಕ್ಕೆ ಒಳ್ಳೆಯ ಅಭಿಪ್ರಾಯ ಕೇಳಿ ಬರುತ್ತಿವೆ. ಡಾನ್, ರೌಡಿಸಂ ಹಾಗೂ ಸೆಂಟಿಮೆಂಟ್ ಚಿತ್ರಗಳಲ್ಲಿ ಕಣ್ತುಂಬಿಕೊಂಡಿದ್ದ ಜನತೆಗೆ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಕುರುಡನ ಪಾತ್ರಧಾರಿಯಾಗಿ ವಿಶಿಷ್ಟ ಪ್ರಯತ್ನ ಮಾಡಿದ್ದಾರೆ. ಚಿತ್ರ ಬಿಡುಗಡೆ ಮಾಡುವ ದಿನಾಂಕ ಇನ್ನೂ ತಿಳಿದು ಬಂದಿಲ್ಲ. ಚಿತ್ರದ ನಿರ್ದೇಶನ ಜಿ. ವಿ. ಆರ್. ವಾಸು ಮತ್ತು ನಿರ್ಮಾಪಕ ಸತ್ಯನಾರಾಯಣ

 ಬೀರ್ ಬಲ್ ನಿರ್ದೇಶನ ಮತ್ತು ನಟನೆ ಶ್ರೀನಿ ಹಾಗೂ ನಿರ್ಮಾಣ ಟಿ. ಆರ್. ಚಂದ್ರಶೇಖರ್ ಈ ಚಿತ್ರ ನಿಗೂಢತೆ. ಪ್ರಶ್ನಾರ್ಥಕ, ಅನುಮಾನಾಸ್ಪದದ ರೀತಿಯಲ್ಲಿ ಗಮನಿಸುವ ಚಿತ್ರವಾಗಿದ್ದು ಈಗಾಗಲೇ ಕುತೂಹಲ ಮೂಡಿಸಿದೆ

ಇತ್ತೀಚೆಗೆ ಉಪೇಂದ್ರ ಅವರು ಬೀರ್ ಬಲ್ ಚಿತ್ರದ ಮೊದಲ ಟ್ರೈಲರ್ ಫೈಂಡಿಂಗ್ ವಜ್ರಮುನಿ ಬಿಡುಗಡೆ ಮಾಡಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಈ ಚಿತ್ರ ಜನವರಿ ತಿಂಗಳಲ್ಲಿ ಬರಲಿದೆ.

ಭಿನ್ನ ಹೆಸರಿಗೆ ತಕ್ಕಂತೆ ಚಿತ್ರ ಭಿನ್ನವಾಗಿದ್ದು ಒಂದೊಂದು ವಾರದಲ್ಲೂ ಚಿತ್ರದ ಕಾರ್ಯದ ಬಗೆಗಿನ ಮಾಹಿತಿಯನ್ನು ಅಂತರ್ಜಾಲ ಹರಿಬಿಟ್ಟಿದ್ದಾರೆ. ಭಿನ್ನ ಚಿತ್ರದ ಕಥೆ ಮತ್ತು ನಿರ್ದೇಶನ ಶುದ್ಧಿ ಫೆಮ್ ಆದರ್ಶ್ ಹೆಚ್ ಈಶ್ವರಪ್ಪ , ನಿರ್ಮಾಪಕ ಯತೀಶ್ ವೆಂಕಟೇಶ್ ರವರ ಸಾರಥ್ಯದಲ್ಲಿ ನಡೆದಿದ್ದು. ಜನವರಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಯಾವುದೇ ಹಾಡು ಇಲ್ಲದಿರುವುದು ವಿಶೇಷ.

ಕವಲುದಾರಿ ಈ ಚಿತ್ರ ಪತ್ತೆದಾರಿ ಕಥೆಯಾಗಿದ್ದು ಉತ್ತಮ ತಾರಾಭಳಗದೊಂದಿಗೆ ಸಿದ್ಧವಾಗಿದೆ. ಕಥೆ ಮತ್ತು ನಿರ್ದೇಶನ ಹೇಮಂತ್ ಎಮ್ ರಾವ್ ನಿರ್ವಹಿಸಿದ್ದಾರೆ.

ಈ ಚಿತ್ರಕ್ಕೆ ಒಂದು ವಿಶೇಷತೆ ಇದೆ. ಅದೇನೆಂದರೆ ಈ ಚಿತ್ರವನ್ನು ನಮ್ಮ ನಿಮ್ಮೆಲ್ಲರ ನೆಚ್ಚಿನ ಪುನೀತ್ ರಾಜ್‌ಕುಮಾರ್ ಮತ್ತು ಅವರ ಪತ್ನಿ ಪಿ ಆರ್ ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ.

ಬೆಲ್_ಬಾಟಂ ಚಿತ್ರ ತನಿಖಾತ್ಮಕ ವಿಷಯವನ್ನು ಒಳಗೊಂಡಿದೆ. ಈ ಚಿತ್ರದ ನಿರ್ದೇಶಕ ಜಯತೀರ್ಥ ಮತ್ತು ನಿರ್ಮಾಪಕ ಸಂತೋಷ್ ಕುಮಾರ್.

ಬೆಲ್_ಬಾಟಂ ಚಿತ್ರದ ಮೊದಲ ಟೀಸರ್ ನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದರು . ರಿಷಬ್ ಶೆಟ್ಟಿ ಮತ್ತು ಹರಿಪ್ರಿಯ ಉತ್ತಮ ಪ್ರದರ್ಶನ ನೀಡಿದ್ದಾರೆ . ಈ ಚಿತ್ರ ಜನವರಿ ತಿಂಗಳಲ್ಲಿ ಬರಲಿದೆ

ಒಂದರ ಹಿಂದೆ ಒಂದರಂತೆ ಅತ್ಯುತ್ತಮ ಕುತೂಹಲಕಾರಿ ಚಿತ್ರಗಳು ಬರುತ್ತಿದ್ದು 2019ರ ಮುನ್ನುಡಿ ಬರೆಯುತ್ತೀವೆ.

One Comments

  • AshaArun 30 / 12 / 2018 Reply

    Good luck

Leave a Reply