ಕನ್ನಡ ಚಿತ್ರರಂಗ ಕಂಡಂತಹ ಅದ್ಬುತ ನಿರ್ದೇಶಕರು ಮತ್ತು ಹಿರಿಯ ನಿರ್ದೇಶಕರು ಗಿರೀಶ್ ಕಾಸರವಳ್ಳಿ ಅವರು ಸದ್ಯ ಚಿತ್ರರಂಗದಿಂದ ಕೊಂಚ ದೂರವೇ ಇದ್ದಾರೆ ಆದರೂ ಅವರ ಸಾಧನೆಗಳು ಅವರ ಚಿತ್ರಗಳು ಯಾವುದು ಮರೆಯುವಂತಿಲ್ಲ,

ಗಿರೀಶ್ ಕಾಸರವಳ್ಳಿ ಅವರ ಸಾಧನೆಗೆ ಅನೇಕ ರಾಷ್ಟ್ರ ಪ್ರಶಸ್ತಿಗಳು ದೊರಕಿವೆ ಅವರ ಎಲ್ಲಾ ಚಿತ್ರಗಳು ನಿಜಕ್ಕೂ ಅದ್ಭುತ ಕಲಾತ್ಮಕ ಚಿತ್ರಗಳಿಗೆ ಇನ್ನೊಂದು ಹೆಸರೇ ಗಿರೀಶ್ ಕಾಸರವಳ್ಳಿ ಎನ್ನಬಹುದು ಇದೀಗ ಅವರು 70 ನೇ ವರ್ಷದ ಹುಟ್ಟು ಹಬ್ಬವನ್ನ ಆಚರಿಸುತ್ತಿದ್ದು ಇದೇ ಖುಷಿಯಲ್ಲಿ ಅವರ ಹೊಸ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹೊರಬಿದ್ದಿದೆ ಓದಿ,

ಇಲ್ಲಿರಲಾರೆ ಅಲ್ಲಿ ಹೋಗಲಾರೆ ಇದುವೇ ಗಿರೀಶ್ ಕಾಸರವಳ್ಳಿ ಅವರ ಹೊಸ ಚಿತ್ರದ ಟೈಟಲ್ ಈ ಚಿತ್ರವನ್ನ ಎಸ್.ವಿ.ಶಿವಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದು ಎಚ್.ಎಂ.ರಾಮಚಂದ್ರ ಅವರು ಛಾಯಾಗ್ರಾಹಕರಾಗಿದ್ದಾರೆ,

ಇನ್ನು ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಚಿತ್ರಕಥೆಯನ್ನ ಪ್ರಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಹಾಲಿನ ಮೀಸೆ ಕಥೆಯಿಂದ ಸ್ಫೂರ್ತಿ ಪಡೆದುಕೊಂಡು ಮಾಡಲಾಗಿದೆ,
ಬರೋಬ್ಬರಿ 7 ವರ್ಷಗಳ ನಂತರ ಒಂದು ಅದ್ಭುತ ಚಿತ್ರವನ್ನ ನಿರ್ದೇಶನ ಮಾಡಲು ಹೊರಟಿರುವ ಗಿರೀಶ್ ಕಾಸರವಳ್ಳಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

Leave a Reply