ನಮ್_ಟಾಕೀಸ್.ಇನ್ ವಿಮರ್ಶೆ ಮತ್ತು ರೇಟಿಂಗ್ 【4.5/5】

ಚಿತ್ರ – ಕಾಳಿದಾಸ ಕನ್ನಡ ಮೇಷ್ಟ್ರು
ತಾರಾಗಣ – ನವರಸ ನಾಯಕ ಜಗ್ಗೇಶ್,ಮೇಘನಾ ಗಾವ್ನ್ಕರ್
ನಿರ್ದೇಶಕರು – ಕವಿರಾಜ್
ನಿರ್ಮಾಪಕರು – ಉದಯ್ ಕುಮಾರ್
ಸಂಗೀತ ನಿರ್ದೇಶಕರು – ಗುರುಕಿರಣ್

ವಿಮರ್ಶೆ

ನವರಸ ನಾಯಕ ಜಗ್ಗೇಶ್ ಅವರು ನೀರ್ ದೋಸೆ ಚಿತ್ರದ ನಂತರ ಮಾಡುತ್ತಿರುವ ಒಂದೊಂದು ಚಿತ್ರಗಳು ಸಹ ಬಹಳ ವಿಶಿಷ್ಟವಾಗಿವೆ ಬೇರೆ ಬೆರೆಹದೇ ಕಥಾಹಂದರವನ್ನ ಒಳಗೊಂಡಿವೆ ಅವರು ನಟಿಸಿರುವ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಟ್ರೈಲರ್ ಮತ್ತು ಹಾಡುಗಳ ಮೂಲಕ ಬಹಳ ನಿರೀಕ್ಷೆ ಮೂಡಿಸಿತ್ತು ಇದೀಗ ಚಿತ್ರ ಇಂದು ಬಿಡುಗಡೆಯಾಗಿ ಒಳ್ಳೆಯ ಒಪೆನಿಂಗ್ ಸಹ ಪಡೆದುಕೊಂಡಿದೆ ಬನ್ನಿ ಚಿತ್ರ ಹೇಗಿದೆ ಹೇಳ್ತೀವಿ,

ಕನ್ನಡ ಶಿಕ್ಷಕರಾಗಿ ಜಗ್ಗಣ್ಣ ಅವರು ನಟಿಸಿದ್ದರೆ ಇಂಗ್ಲಿಷ್ ಇಷ್ಟಪಡುವ ಪತ್ನಿ ಪಾತ್ರದಲ್ಲಿ ಮೇಘನಾ ಗಾವ್ನ್ಕರ್ ಜಗ್ಗಣ್ಣ ಅವರಿಗೆ ಜೋಡಿಯಾಗಿದ್ದಾರೆ,
ಕಥೆ ಇಲ್ಲಿ ಬಹಳ ಪ್ರಮುಖ ಪಾತ್ರವಹಿಸಿದೆ ಎನ್ನಬಹುದು ಅರ್ಥಪೂರ್ಣ ಕಥೆಗೆ ಮನರಂಜನಾತ್ಮಕ ಚಿತ್ರಕಥೆ ಬೆರೆಸಿ ಮಾಡಿರುವ ಚಿತ್ರವೇ ಕಾಳಿದಾಸ ಕನ್ನಡ ಮೇಷ್ಟ್ರು,

ಹೀಗಿನ ಮಕ್ಕಳ ಪರಿಸ್ಥಿತಿ ಹೇಗಿದೆ ಅಂದರೆ ಹೆತ್ತವರೆ ತಮ್ಮ ಮಕ್ಕಳ ಮೇಲೆ ಒತ್ತಡ ಹಾಕಿ ಓದಿ ಓದಿ ಎಂದು ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಜೊತೆಗೆ ಇಷ್ಟೇ ಮಾರ್ಕ್ಸ್ ಬರಬೇಕು ಎಂಬಂತಹ ಟಾರ್ಗೆಟ್ ಕೂಡ ಕೊಟ್ಟು ಮಕ್ಕಳ ಆತ್ಮಸ್ಥೈರ್ಯವನ್ನ ಕುಗ್ಗಿಸುತ್ತಿದ್ದಾರೆ ಎಲ್ಲಾ ಮಕ್ಕಳಿಗೂ ಅವರದೇ ಆದ ಆಸೆ ಕನಸು ಇರುತ್ತವೆ ಬೇರೆ ಬೇರೆಯದೆ ಟ್ಯಾಲೆಂಟ್ ಇರುತ್ತವೆ ಅವುಗಳಿಗೆ ಯಾರು ಬೆಲೆ ಕೊಡುತ್ತಿಲ್ಲಾ,

ಇದೇ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದ ಕಥಾಹಂದರ ಹೀಗಿನ ಶಿಕ್ಷಣದ ವ್ಯವಸ್ಥೆ ಮಕ್ಕಳ ಪರಿಸ್ಥಿತಿ ಎಲ್ಲವನ್ನ ಹಾಸ್ಯಮಯವಾಗಿ ವ್ಯಂಗ್ಯವಾಗಿ ಚಿತ್ರದಲ್ಲಿ ಹೇಳಲಾಗಿದೆ,
ನಿರ್ದೇಶಕ ಕವಿರಾಜ್ ಅವರ ಈ ಪ್ರಯತ್ನಕ್ಕೆ ನಾವು ಫುಲ್ ಮಾರ್ಕ್ಸ್ ಕೊಡಲೇಬೇಕು,

ನಟನೆಯ ವಿಚಾರಕ್ಕೆ ಬಂದರೆ ಜಗ್ಗಣ್ಣ ಅವರ ಬಗ್ಗೆ ನಾವು ಮಾತನಾಡುವ ಹಾಗೆ ಇಲ್ಲ ಅಷ್ಟೊಂದು ಅದ್ಭುತವಾಗಿ ನಟಿಸಿ ಮತ್ತೊಮ್ಮೆ ಪ್ರೇಕ್ಷಕರನ್ನ ಸಾಕಷ್ಟು ನಗಿಸಿದ್ದಾರೆ ಮೇಘನಾ ಗಾವ್ನ್ಕರ್ ಅವರು ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ,
ಇನ್ನುಳಿದ ಎಲ್ಲಾ ಕಲಾವಿದರು ತಮ್ಮ ಪಾತ್ರಗಳನ್ನ ಉತ್ತಮವಾಗಿ ನಿಭಾಯಿಸಿದ್ದಾರೆ,

ಗುರುಕಿರಣ್ ಅವರ ಸಂಗೀತದ ಹಾಡುಗಳು ಚಿತ್ರಕ್ಕೆ ಪೂರಕವಾಗಿವೆ,
ಉದಯ್ ಕುಮಾರ್ ಅವರು ಬಹಳ ಅಚ್ಚುಕಟ್ಟಾದ ಚಿತ್ರವೊಂದನ್ನ ನಿರ್ಮಾಣ ಮಾಡಿದ್ದಾರೆ,

ಒಟ್ಟಾರೆ ಹೇಳಬೇಕು ಎಂದರೆ ಒಂದು ಮುಖ್ಯವಾದ ವಿಷಯವನ್ನ ಹಾಸ್ಯಮಯವಾಗಿ ಹೇಳಿ ಒಂದು ಸಂದೇಶವನ್ನು ಹೇಳುವ ಸೂಪರ್ ಸಿನಿಮಾ ಕಾಳಿದಾಸ ಕನ್ನಡ ಮೇಷ್ಟ್ರು ಮಿಸ್ ಮಾಡದೆ ನಿಮ್ಮ ಕುಟುಂಬದ ಸಮೇತರಾಗಿ ನೋಡಿ ಆನಂದಿಸಿ

Leave a Reply