ನಮ್_ಟಾಕೀಸ್.ಇನ್ ವಿಮರ್ಶೆ ಮತ್ತು ರೇಟಿಂಗ್

ಚಿತ್ರ – ಕಪಟ ನಾಟಕ ಪಾತ್ರಧಾರಿ
ನಿರ್ಮಾಪಕರು – ಗರುಡ ಕ್ರಿಯೇಷನ್ಸ್
ನಿರ್ದೇಶಕರು – ಕ್ರಿಶ್
ತಾರಾಗಣ – ಬಾಲು ನಾಗೇಂದ್ರ,ಸಂಗೀತಾ ಭಟ್
ಛಾಯಾಗ್ರಹಣ – ಪರಮೇಶ್
ಸಂಗೀತ – ಆದಿಲ್ ನದಾಫ್

ರೇಟಿಂಗ್ : 3.5/5 

ವಿಮರ್ಶೆ

ಕಪಟ ನಾಟಕ ಪಾತ್ರಧಾರಿ ಈ ವಾರ ಬಿಡುಗಡೆಯಾಗಿರುವ ಸಿನಿಮಾ ಇದರಲ್ಲಿ ಬಾಲು ನಾಗೇಂದ್ರ ಮತ್ತು ಸಂಗೀತಾ ಭಟ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ ಟ್ರೈಲರ್ ಮೂಲಕ ಒಂದಷ್ಟು ಕುತೂಹಲಗಳನ್ನ ಹುಟ್ಟು ಹಾಕಿದ್ದ ಸಿನಿಮಾ ಹೇಗಿದೆ ಎಂಬುದನ್ನ ಹೇಳುತ್ತೇವೆ ಮುಂದೆ ಓದಿ,

ಚಿತ್ರದಲ್ಲಿ ನಾಯಕ ನಟ ಒಬ್ಬ ಕೆಲ ವರ್ಗದ ಬಡ ಕುಟುಂಬದ ಹುಡುಗ ಹುಟ್ಟಿದಾಗಿನಿಂದ ಕಷ್ಟಗಳನ್ನೇ ನೋಡಿಕೊಂಡು ಬೆಳೆದ ಹುಡುಗ ಕೊನೆಗೂ ಒಂದು ಸೆಕೆಂಡ್ ಹ್ಯಾಂಡ್ ಆಟೋ ತಗೊಂಡು ಬದುಕು ಕಟ್ಟಿಕೊಳ್ಳುವತ್ತ ಮುಖ ಮಾಡುತ್ತಾನೆ ಇವನಿಗೆ ಜೊತೆಯಾಗಿ ನಾಯಕಿ ಸಂಗೀತಾ ಭಟ್ ನಿಲ್ಲುತ್ತಾಳೆ ನಂತರ ಒಂದಷ್ಟು ಲವ್ವಿ ಡವ್ವಿ ಹಾಡು ಪಾಡು ಎಲ್ಲಾ ಬರುತ್ತದೆ ಇದಾದ ಮೇಲೆ ಚಿತ್ರಕ್ಕೊಂದು ನಿರೀಕ್ಷೆ ಮಾಡಿರದ ತಿರುವು ದೊರೆಯುತ್ತದೆ,

ಆ ತಿರುವಿನ ನಂತರ ನಾಯಕ ಪೊಲೀಸ್ ಗಳ ಅತಿಥಿಯಾಗಿ ಅನುಮಾನಾಸ್ಪದ ಆರೋಪಿಯಾಗುತ್ತಾನೆ ಸಾಕಷ್ಟು ವಿಚಾರಣೆಗಳು ಪ್ರಶ್ನೆಗಳು ನಾಯಕನ ಮುಂದೆ ಪೊಲೀಸ್ ಗಳು ಇಡುತ್ತಾರೆ ತುಂಬಾ ಟಾರ್ಚರ್ ಕೂಡ ಕೊಡುತ್ತಾರೆ ಇದೆಲ್ಲದಕ್ಕೂ ಉತ್ತರ ನೀಡುವ ನಾಯಕ ನಮ್ಮೆಲ್ಲರಿಗೂ ಪಾಪ ಎನಿಸುತ್ತಾನೆ ಮತ್ತು ಅಮಾಯಕ ಎನಿಸುತ್ತಾನೆ ಇದೇ ತರಹ ಹಿರಿಯ ಪೊಲೀಸ್ ಅಧಿಕಾರಿಗೂ ಅನಿಸುವ ಕಾರಣ ಅವರ ಬಿಡುಗಡೆಯೂ ಆಗುತ್ತದೆ,

ಟೈಟಲ್ ಗೆ ತಕ್ಕಂತೆ ನಾಯಕ ಬಾಲು ನಾಗೇಂದ್ರ ಅವರು ಇಲ್ಲಿ ಕಪಟ ನಾಟಕ ಪಾತ್ರಧಾರಿಯಾಗಿ ಮಿಂಚು ಹರಿಸಿದ್ದಾರೆ,
ನಾಯಕಿ ಸಂಗೀತಾ ಭಟ್ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ,
ಮೊದಲ ನಿರ್ದೇಶನದಲ್ಲೇ ಕ್ರಿಶ್ ಅವರು ಬಹಳ ಇಷ್ಟವಾಗುತ್ತಾರೆ ಖಂಡಿತ ಅವರಿಗೆ ಒಳ್ಳೆಯ ಭವಿಷ್ಯವಿದೆ,
ಆದಿಲ್ ನದಾಫ್ ಸಂಗೀತ,ಪರಮೇಶ್ ಅವರ ಛಾಯಾಗ್ರಹಣ,ಕಿರಣ್ ಚಂದ್ರ ಮತ್ತು ವೇನು ಹಸ್ರಾಳಿ ಸಂಭಾಷಣೆ ಇವೆಲ್ಲವೂ ಚಿತ್ರಕ್ಕೆ ಸಾಕಷ್ಟು ಪ್ಲಸ್ ಆಗಿದೆ.

ಅತ್ಯಾಚಾರಕ್ಕೆ ಸಿಲುಕಿದ ಸತ್ತು ಹೋದ ಒಬ್ಬ ಅಮಾಯಕ ಹುಡುಗಿ ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾಳೆನ್ನುವ ಕತೆಗೆ ಸಾಕಷ್ಟು ಟ್ವಿಸ್ಟ್ ಗಳಿವೆ ಇದಕ್ಕೂ ನಾಯಕನಿಗೂ ಸಂಬಂಧ ಏನು ಎಲ್ಲವನ್ನು ತಿಳಿಯಲು ಒಮ್ಮೆ ಚಿತ್ರವನ್ನ ನೋಡಿ ಆನಂದಿಸಿ ಖಂಡಿತ ನಿಮಗೆ ಇಷ್ಟವಾಗುತ್ತದೆ.

Leave a Reply