ಸ್ಯಾಂಡಲ್ ವುಡ್ ನ ಸ್ಟಾರ್ ಡೈರೆಕ್ಟರ್ ಗಳಲ್ಲಿ ಪವನ್ ಒಡೆಯರ್ ಕೂಡ ಒಬ್ಬರು ಅವರ ಒಂದೊಂದು ಚಿತ್ರಗಳು ಸಹ ಚೆನ್ನಾಗಿರುತ್ತವೆ ಮತ್ತು ಮೇಕಿಂಗ್ ಎಲ್ಲರಿಗೂ ಇಷ್ಟವಾಗುತ್ತದೆ ಅವರ ನಿರ್ದೇಶನದ ಕೊನೆಯ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಟಸಾರ್ವಭೌಮ ಸಿನಿಮಾ ಅದು ಬಹಳ ದೊಡ್ಡ ಮಟ್ಟದಲ್ಲಿ ಹಿಟ್ ಕೂಡ ಆಗಿತ್ತು,

ಪವನ್ ಒಡೆಯರ್ ಅವರ ಮುಂದಿನ ಸಿನಿಮಾ ರೆಮೋ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಈ ಚಿತ್ರದಲ್ಲಿ ರೋಗ್ ಖ್ಯಾತಿಯ ಇಶಾನ್ ಅವರು ನಾಯಕರಾಗಿ ನಟಿಸುತ್ತಿದ್ದು ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ಅವರು ನಟಿಸುತ್ತಿದ್ದಾರೆ ಈ ಚಿತ್ರಕ್ಕೆ ಇಶಾನ್ ಅವರ ಅಣ್ಣನೆ ಆದ ಖ್ಯಾತ ನಿರ್ಮಾಪಕ ಸಿ.ಆರ್.ಮನೋಹರ್ ಅವರೇ ಬಂಡವಾಳ ಹೂಡಿದ್ದಾರೆ,

ರೆಮೋ ಚಿತ್ರತಂಡದಿಂದ ಹೊರಬಿದ್ದಿರುವ ಲೇಟೆಸ್ಟ್ ಮಾಹಿತಿ ಏನೆಂದರೆ ಅದು ದಕ್ಷಿಣ ಭಾರತ ಖ್ಯಾತ ನಂತರದ ಶರತ್ ಕುಮಾರ್ ಅವರು ಇದೀಗ ರೆಮೋ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದು ಶ್ರೀ ದೇಶಪಾಂಡೆ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಇವರ ಪಾತ್ರಕ್ಕೆ ಬಹಳ ಮಹತ್ವವಿದೆ ಎಂದು ನಿರ್ದೇಶಕ ಪವನ್ ಒಡೆಯರ್ ಅವರು ಹೇಳಿದ್ದಾರೆ,

ರೆಮೋ ಸಿನಿಮಾವನ್ನ ಬಹಳ ರಿಚ್ ಆಗಿ ಮೇಕಿಂಗ್ ಮಾಡಲಾಗುತ್ತಿದ್ದು ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರು ಸಂಗೀತ ನೀಡುತ್ತಿದ್ದಾರೆ.

Leave a Reply