ಸಾಮಾನ್ಯವಾಗಿ ನಾಯಕ ನಟರಿಗೆ ಅಭಿಮಾನಿ ವರ್ಗ ಜಾಸ್ತಿ ಇರುತ್ತದೆ ಮತ್ತು ಸಂಘಗಳು ತುಂಬಾ ಇರುತ್ತವೆ ನಾಯಕ ನಟರು ನಟಿಸುವುದನ್ನ ಬಿಟ್ಟರು ಇಹಲೋಕ ತ್ಯಜಿಸಿದರು ಅವರಿಗಿರುವ ಅಭಿಮಾನಿಗಳು ಅಭಿಮಾನ ಬಿಡುವವರಲ್ಲ ಆದರೆ ನಾಯಕ ನಟಿಯರಿಗೆ ಇದೆಲ್ಲಾ ಇರುವುದಿಲ್ಲ ಆದರೂ ನಾಯಕ ನಟರಂತೆ ಅಪಾರವಾದ ಅಭಿಮಾನಿ ಬಳಗವನ್ನ ಸಂಘಗಳನ್ನ ಒಂದಿರುವ ಒಬ್ಬರೇ ನಾಯಕಿ ಅದು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು,

ಹೌದು ರಮ್ಯಾ ಅವರು ಚಿತ್ರರಂಗದಿಂದ ದೂರವಿದ್ದರು ಅವರನ್ನ ಬಿಡದೆ ಅವರ ಮೇಲಿರುವ ಅಭಿಮಾನವನ್ನ ಮರೆಯದೆ ಇಂದಿಗೂ ಅದೇ ಅಭಿಮಾನ ಪ್ರೀತಿ ಉಳಿಸಿಕೊಂಡಿರುವ ಅಪಾರವಾದ ಅಭಿಮಾನಿ ಬಳಗ ಸಾಕಷ್ಟಿವೆ ಅದರಲ್ಲಿ ಒಂದು ಅಭಿಮಾನಿ ಬಳಗ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಭಿಮಾನಿಗಳು ಇದೀಗ ರಮ್ಯಾ ಅವರ ಹುಟ್ಟು ಹಬ್ಬವನ್ನ ಬಹಳ ಅರ್ಥಪೂರ್ಣವಾಗಿ ಆಚರಿಸಿದೆ,

ನೆನ್ನೆ ರಮ್ಯಾ ಅವರ ಹುಟ್ಟು ಹಬ್ಬದ ವಿಶೇಷವಾಗಿ ಈ ಸಂಘದ ಸದಸ್ಯರೆಲ್ಲಾ ಸೇರಿ ಬೆಳಿಗ್ಗೆ 11 ಗಂಟೆಗೆ ಮಲ್ಲೇಶ್ವರಂ ನ ಮಹಾಗಣಪತಿ ದೇವಸ್ಥಾನದಲ್ಲಿ ರಮ್ಯಾ ಅವರ ಹೆಸರಿನಲ್ಲಿ ಪೂಜೆ ಮಾಡಿಸಿ ನಂತರ ಮಧ್ಯಾಹ್ನ 2 ಗಂಟೆಗೆ ಮತ್ತಿಕೆರೆಯಲ್ಲಿರುವ ಸರಸ್ವತಿ ಎಜುಕೇಷನಲ್ ಟ್ರಸ್ಟ್ ನಲ್ಲಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಅವರಿಗೆ ಆರ್ಥಿಕವಾಗಿ ಸಹಾಯವನ್ನ ಮಾಡಿದ್ದಾರೆ,

ರಮ್ಯಾ ಅವರ ಕಂಬ್ಯಾಕ್ ಚಿತ್ರಕ್ಕಾಗಿ ಈ ಅಭಿಮಾನಿ ಬಳಗ ಕಾಯುತ್ತಿದ್ದು ಅವರ ಅನುಪಸ್ಥಿತಿಯಲ್ಲೂ ಸಹ ಅವರ ಹುಟ್ಟು ಹಬ್ಬವನ್ನ ಬಹಳ ಅರ್ಥಪೂರ್ಣವಾಗಿ ಆಚರಿಸಿರುವ ಈ ಅಭಿಮಾನಿ ಬಳಗದ ಕೆಲಸಕ್ಕೆ ನಾವು ಮೆಚ್ಚುಗೆ ಸೂಚಿಸಲೇಬೇಕು

Leave a Reply