ಚಂದನವನದ ಬುಲ್ ಬುಲ್ ರಚಿತಾ ರಾಮ್ ಅವರು ಬಹಳ ಬ್ಯುಸಿ ನಟಿ ಎಂಬುದು ಎಲ್ಲರಿಗೂ ಗೊತ್ತು ಸದ್ಯ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯಾಗಿರುವ ಅವರು ಇದುವರೆಗೆ ನಾಯಕಿ ಪ್ರಧಾನ ಚಿತ್ರದಲ್ಲಿ ನಟಿಸಿಲ್ಲ ಎಂಬುದು ಸಹ ಎಲ್ಲರಿಗೂ ಗೊತ್ತು,

8 ಎಂ ಎಂ ಚಿತ್ರದ ಖ್ಯಾತಿಯ ನಿರ್ಮಾಪಕರಾದ ನಾರಾಯಣ ಬಾಬು ಅವರ ನಿರ್ಮಾಣದ
ಮಹಿಳಾ ಪ್ರಧಾನ ಚಿತ್ರವೊಂದರಲ್ಲಿ ಡಿಂಪಲ್ ಕ್ವೀನ್ ನಟಿಸಬೇಕಿತ್ತು ಆ ಚಿತ್ರದ ಹೆಸರು ಏಪ್ರಿಲ್ ಎಂದು ಬಹಳ ಹಿಂದೆಯೇ ಸುದ್ದಿಯಾಗಿತ್ತು ಆದರೆ ಕಾರಣಾಂತರಗಳಿಂದ ಆ ಚಿತ್ರ ಕೊಂಚ ತಡವಾಗಿತ್ತು ಇನ್ನೇನು ಈ ಚಿತ್ರ ಬರುವುದಿಲ್ಲಾ ಅದರ ಕಥೆ ಇಷ್ಟೇ ಮುಗಿಯಿತು ಎಂದು ಮರೆತು ಹೋಗಿದ್ದವರಿಗೆ ಇದೀಗ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ ನೋಡಿ,

ಸದ್ಯ ಏಪ್ರಿಲ್ ಚಿತ್ರತಂಡದಿಂದ ಹೊರಬಿದ್ದಿರುವ ಮಾಹಿತಿ ನಾಯಕಿ ರಚಿತಾ ರಾಮ್ ಗೆ ಜೊತೆಯಾಗಿ ನಟ ಚಿರಂಜೀವಿ ಸರ್ಜಾ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದು ಇದರ ಜೊತೆ ಚಿತ್ರಕಥೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಸ್ವಲ್ಪ ಮಾಸ್ ಮತ್ತು ಕಮರ್ಷಿಯಲ್ ಅಂಶಗಳನ್ನ ಸೇರಿಸಿ ಚಿತ್ರವನ್ನ ನಿರ್ದೇಶನ ಮಾಡಲು ನಿರ್ದೇಶಕ ಸತ್ಯ ರಾಯುಲು ನಿರ್ಧಾರ ಮಾಡಿದ್ದಾರೆ

ಸದ್ಯದಲ್ಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು ಏಪ್ರಿಲ್ ಚಿತ್ರಕ್ಕೆ ಕಾಯುತ್ತಿದ್ದವರಿಗೆ ಖಂಡಿತ ಇದು ಸಿಹಿ ಸುದ್ದಿಯಾಗಿದೆ ಶೇರ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ