ಸಾಮಾನ್ಯವಾಗಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೆ ಮಾಮೂಲಾಗಿ ಜೀವನ ನಡೆಸಲು ಚಿಕ್ಕ ಚಿಕ್ಕ ವಿಷಯಗಳನ್ನ ಎಂಜಾಯ್ ಮಾಡಲು ಬಹಳ ಇಷ್ಟವಿರುತ್ತದೆ ಆದರೆ ಅವರು ಸೆಲೆಬ್ರಿಟಿ ಆಗಿರುವ ಕಾರಣ ಪಬ್ಲಿಕ್ ನಲ್ಲಿ ಓಡಾಡುವುದೇ ಕಷ್ಟವಾಗಿದೆ,

ಆದರೂ ಕೆಲವು ಸೆಲೆಬ್ರಿಟಿ ಗಳು ಮಾರು ವೇಷದಲ್ಲಿ ಹೊರಗೆ ಬಂದು ಖುಷಿಯನ್ನ ಪಡುತ್ತಾರೆ ಇದೀಗ ಬುಲ್ ಬುಲ್ ರಚಿತಾ ರಾಮ್ ಅವರು ತಮ್ಮ ಬಹು ದಿನದ ಕನಸೊಂದನ್ನ ನನಸು ಮಾಡಿಕೊಂಡಿದ್ದಾರೆ,

ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಅವರ ಸ್ನೇಹಿತೆ ಜೊತೆ ಮೆಟ್ರೋ ರೈಲಿನಲ್ಲಿ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಯಾರಿಗೂ ಗೊತ್ತಾಗದ ಹಾಗೆ ಪ್ರಯಾಣ ಮಾಡಿ ಬಹಳ ಸಂತೋಷ ಪಟ್ಟಿದ್ದಾರೆ ಈ ಫೋಟೋ ಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ,

ಈ ಹಿಂದೆ ನವರಸ ನಾಯಕ್ ಜಗ್ಗೇಶ್ ಅವರು ಮತ್ತು ಬಾಲಿವುಡ್ ಕಿಂಗ್ ಅಕ್ಷಯ್ ಕುಮಾರ್ ಅವರು ಸಹ ಇದೇ ತರಹ ಮಾರು ವೇಷದಲ್ಲಿ ಸಿಟಿ ಸುತ್ತಿ ಖುಷಿ ಪಟ್ಟಿದ್ದನ್ನ ನಾವು ಇಲ್ಲಿ ನೆನೆಸಿಕೊಳ್ಳಬಹುದು.

Leave a Reply