ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಭಿನ್ನ ವಿಭಿನ್ನ ಚಿತ್ರಗಳು ಬಂದು ಪ್ರೇಕ್ಷಕರ ಮನ ಗೆದ್ದಿವೆ ಬಹಳಷ್ಟು ಕಲಾತ್ಮಕ ಚಿತ್ರಗಳು ಬರುತ್ತಲೇ ಇರುವ ಈ ಸಂದರ್ಭದಲ್ಲಿ ಇಬ್ಬರು ಅಂದರ ನಡುವಣ ಮುಗ್ದ ಪ್ರೀತಿಯ ಕಥಾನಕ #ರಾಗ ಚಿತ್ರ ಸದ್ಯ ಕನ್ನಡ ಚಿತ್ರರಂಗದಲ್ಲಿ ಬಹು ದೊಡ್ಡ ನಿರೀಕ್ಷೆ ಮೂಡಿಸಿರುವ ಚಿತ್ರ,

ನಿರ್ದೇಶಕ ಪಿ.ಸಿ.ಶೇಖರ್ ಅವರು ಸದಾ ಒಂದಿಲ್ಲೊಂದು ವಿಶೇಷ ಚಿತ್ರಗಳನ್ನ ಕೊಡುತ್ತಾ ಬಂದಿದ್ದಾರೆ ಈಗ ಅವರು ನಿರ್ದೇಶನ ಮಾಡಿರುವ #ರಾಗ ಚಿತ್ರಕ್ಕೆ ಹಾಸ್ಯ ನಟ ಮಿತ್ರಾ ಅವರ ನಿರ್ಮಾಣ ಮತ್ತು ಅವರೇ ನಾಯಕರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ,

ಮಿತ್ರಾ ಅವರು ಅವರ ಚಿತ್ರಕ್ಕೆ ಬಂಡವಾಳ ಹೂಡುವುದಲ್ಲದೆ ಬಹಳಷ್ಟು ಶ್ರಮವಹಿಸಿ ಅದ್ಭುತವಾಗಿ ನಟಿಸಿದ್ದಾರೆ ಅದು ಟ್ರೈಲರ್ ನೋಡಿದಾಗಲೇ ತಿಳಿಯುತ್ತದೆ, ಈ #ರಾಗ ಚಿತ್ರದ ಧ್ವನಿಸುರುಳಿ ಈಗ ಬಿಡುಗಡೆಯಾಗಿದೆ,

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಹಾಡುಗಳ ಬಿಡುಗಡೆ ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಹಾಡುಗಳ ಲೈವ್ ಷೋ ಮೂಲಕ ನೆರವೇರಿತು ಇದು ಕನ್ನಡ ಚಿತ್ರರಂಗದಲ್ಲೇ ಮೊದಲು ಎನ್ನಬಹುದು,

ಚಿತ್ರದಲ್ಲಿ ಇರುವ ಒಟ್ಟು 4 ಹಾಡುಗಳು ಕೇಳುಗರಿಗೆ ಮೋಡಿ ಮಾಡುವುದು ಖಚಿತ ಅಂದಹಾಗೆ ಹಾಡುಗಳಿಗೆ ಸಾಹಿತ್ಯವನ್ನ ಕವಿರಾಜ್,ಜಯಂತ್ ಕಾಯ್ಕಿಣಿ ಮತ್ತು ಡಾ#ನಾಗೇಂದ್ರ ಪ್ರಸಾದ್ ಅವರು ನೀಡಿದ್ದಾರೆ,

ಪೋಸ್ಟರ್,ಟ್ರೈಲರ್ ನಿಂದ ಬಹಳಷ್ಟು ಭರವಸೆ ಮೂಡಿಸಿದ್ದ #ರಾಗ ಚಿತ್ರ ಈಗ ಹಾಡುಗಳ ಮೂಲಕ ಇನ್ನಷ್ಟು ನಿರೀಕ್ಷೆ ಹೆಚ್ಚುವಂತೆ ಮಾಡಿದೆ ಇನ್ನೇನು ಸದ್ಯದಲ್ಲೇ ಚಿತ್ರ ತೆರೆಗೆ ಅಪ್ಪಳಿಸಲಿದೆ ಎಲ್ಲರೂ ಮಿಸ್ ಮಾಡದೇ ನೋಡಿ…

Leave a Reply