ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ಅವನೇ ಶ್ರೀಮನ್ನಾರಾಯಣ ಇದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ನಾಯಕರಾಗಿ ನಟಿಸಿರುವ ಚಿತ್ರ ಅಂತ ಎಲ್ಲರಿಗೂ ಗೊತ್ತು ಇದರ ಸಣ್ಣ ಟೀಸರ್ ಒಂದನ್ನ ನೋಡಿ ಖುಷಿ ಪಟ್ಟಿದ್ದ ಕನ್ನಡ ಸಿನಿರಸಿಕರು ಟ್ರೈಲರ್ ಗಾಗಿ ಬಹಳ ಕಾಯುತ್ತಿದ್ದರು ಅಂತಿಮವಾಗಿ ಇದೀಗ ಟ್ರೈಲರ್ ಬಿಡುಗಡೆಯಾಗಿದೆ,

ಟ್ರೈಲರ್ ನೋಡಿದ್ರೆ ನಮಗೆಲ್ಲಾ ಅನಿಸುವುದು ಒಂದೇ ಖಂಡಿತ ಇದು ಹೊಸತನದ ಕಥೆ ಎಂದು ಇದಲ್ಲದೆ ಚಿತ್ರದಲ್ಲಿನ ಕ್ವಾಲಿಟಿ ಮೇಕಿಂಗ್ ನಿಜಕ್ಕೂ ನಮ್ಮ ಕನ್ನಡ ಚಿತ್ರರಂಗ ಹೆಮ್ಮೆ ಪಡುವಂತೆ ಮಾಡುತ್ತಿದೆ,
ಅವನೇ ಶ್ರೀಮನ್ನಾರಾಯಣ ಸಿನಿಮಾ ಪ್ಯಾನ್ ಇಂಡಿಯಾ ಮೂವಿ ಏಕಕಾಲಕ್ಕೆ ಬರೋಬ್ಬರಿ 5 ಭಾಷೆಗಳಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ ಇದೀಗ ಟ್ರೈಲರ್ ಕೂಡ 5 ಭಾಷೆಗಳಲ್ಲೇ ಬಿಡುಗಡೆಯಾಗಿದೆ,

ಸಾಕಷ್ಟು ಕಲಾವಿದರು ನಟಿಸಿರುವ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವತ್ಸ ಅವರು ಜೋಡಿಯಾಗಿ ನಟಿಸಿದ್ದು ರಕ್ಷಿತ್ ಇಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಕಥೆ ಚಿತ್ರಕಥೆಯಲ್ಲಿ ಕೂಡ ಅವರ ಕೊಡುಗೆಯಿದೆ,
ಸಚಿನ್ ಅವರು ಈ ಚಿತ್ರದ ನಿರ್ದೇಶಕರು ಮೊದಲ ಚಿತ್ರದಲ್ಲೇ ಅವರ ನಿರ್ದೇಶನ ಹಾಲಿವುಡ್ ಶೈಲಿಯಲ್ಲಿದೆ,

ಟ್ರೈಲರ್ ನಲ್ಲಿ ಹಲವಾರು ವಿಷಯಗಳನ್ನ ಹೇಳಿರುವ ಚಿತ್ರತಂಡ ಚಿತ್ರ ಹೇಗಿರಬಹುದು ಎಂಬ ಸಣ್ಣ ಸುಳಿವನ್ನ ನೀಡಿದೆ ಮತ್ತು ಚಿತ್ರ ಅದೆಷ್ಟು ವಿಭಿನ್ನವಾಗಿರಲಿದೆ ಎಂದು ವಿಭಿನ್ನವಾಗಿರುವ ಈ ಟ್ರೈಲರ್ ನೋಡಿದರೆ ಎಲ್ಲರಿಗೂ ತಿಳಿದುಬಿಡುತ್ತದೆ,
ಒಟ್ಟಾರೆ ಎಲ್ಲರ ನಿರೀಕ್ಷೆಗೆ ತಕ್ಕಂತೆ ಟ್ರೈಲರ್ ಮೂಡಿಬಂದಿದ್ದು ಚಿತ್ರ ಇದಕ್ಕಿಂತ ಚೆನ್ನಾಗಿರುತ್ತದೆ ಎಂಬ ನಂಬಿಕೆ ಖಂಡಿತ ಎಲ್ಲರಿಗೂ ಇದೆ ಅವನೇ ಶ್ರೀಮನ್ನಾರಾಯಣ ನಮ್ಮ ಕನ್ನಡ ಚಿತ್ರರಂಗ ಹೆಮ್ಮೆ ಪಡುವಂತಹ ಚಿತ್ರವಾಗುವುದರಲ್ಲಿ ಯಾವುದೇ ಅನುಮಾನ ಬೇಡ

Leave a Reply