ನಮ್_ಟಾಕೀಸ್.ಇನ್ ವಿಮರ್ಶೆ ಮತ್ತು ರೇಟಿಂಗ್

ಚಿತ್ರ – ಅಳಿದು ಉಳಿದವರು
ತಾರಾಗಣ – ಅಶು ಬೆದ್ರ,ಸಂಗೀತಾ ಭಟ್,ಪವನ್ ಕುಮಾರ್,ಅತುಲ್ ಕುಲಕರ್ಣಿ
ನಿರ್ದೇಶಕರು – ಅರವಿಂದ್ ಶಾಸ್ರ್ರಿ
ನಿರ್ಮಾಪಕರು – ಅಶು ಬೆದ್ರ
ಸಂಗೀತ ನಿರ್ದೇಶಕರು – ಮಿಧುನ್ ಮುಕುಂದನ್

ರೇಟಿಂಗ್ – 3.5/5

ವಿಮರ್ಶೆ 👇

ಈ ವಾರ ಬಿಡುಗಡೆಯಾಗಿರುವ ಚಿತ್ರಗಳಲ್ಲಿ ಪ್ರೇಕ್ಷಕರು ಈ ಚಿತ್ರ ನೋಡಬೇಕು ಎಂದು ಒಂದು ಕಣ್ಣು ಇಟ್ಟಿದ್ದ ಸಿನಿಮಾ ಅಳಿದು ಉಳಿದವರು ಟೈಟಲ್ಲೆ ಹೇಳುವಂತೆ ಇದು ಒಂದು ಡಿಫರೆಂಟ್ ಚಿತ್ರವೇ ಎನ್ನಬಹುದು,

ಕಹಿ ಅಂತಹ ಸೂಪರ್ ಚಿತ್ರವನ್ನ ನಿರ್ದೇಶನ ಮಾಡಿ ಭರವಸೆ ಮೂಡಿಸಿದ್ದ ನಿರ್ದೇಶಕ ಅರವಿಂದ್ ಶಾಸ್ತ್ರಿ ಅವರ ನಿರ್ದೇಶನದ ಸಿನಿಮಾ ಈ ಅಳಿದು ಉಳಿದವರು ಟ್ರೈಲರ್ ಮೂಲಕ ಎಲ್ಲರ ಗಮನ ಸೆಳೆದಿದ್ದು ಇದೀಗ ಇಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಿದೆ ಬನ್ನಿ ಚಿತ್ರ ಹೇಗಿದೆ ಹೇಳುತ್ತೇವೆ,

ಅಳಿದು ಉಳಿದವರು ಸಿನಿಮಾ ಟಿ.ವಿ ಮಾಧ್ಯಮದ ಬಗ್ಗೆ ಸುತ್ತಾ ಸಾಗುವ ಕಥೆಯನ್ನ ಒಳಗೊಂಡಿದ್ದು ಚಿತ್ರದ ನಾಯಕ ಅಶು ಬೆದ್ರ ಇಲ್ಲಿ ಟಿ.ವಿ ಕಾರ್ಯಕ್ರಮದ ನಿರೂಪಕ ನಾಯಕಿ ಸಂಗೀತಾ ಭಟ್ ಹೆಣ್ಣು ಮಕ್ಕಳ ಸ್ವಯಂ ರಕ್ಷಣೆಗೆ ತರಬೇತಿ ನೀಡುವ ಹುಡುಗಿ ಇವರಿಬ್ಬರಿಗೂ ಲವ್ ಆಗುತ್ತದೆ,

ದೆವ್ವ ಭೂತಗಳ ಬಗ್ಗೆ ಕಾರ್ಯಕ್ರಮವೊಂದನ್ನ ಮಾಡುವ ನಾಯಕ 100 ನೇ ಸಂಚಿಕೆಯಲ್ಲಿ ದೊಡ್ಡ ಸವಾಲ್ ಒಂದಕ್ಕೆ ಸಜ್ಜಾಗುತ್ತಾನೆ ಇದು ತನ್ನ ಪ್ರೀತಿ ಮತ್ತು ಪ್ರಾಣವನ್ನ ಪಣಕಿಡುವಂತೆ ಮಾಡುತ್ತದೆ ಈ ಸವಾಲಿನಲ್ಲಿ ನಾಯಕ ಯಶಸ್ವಿಯಾಗುತ್ತಾನಾ ಎಂಬುದೇ ಬಹಳ ಕುತೂಹಲಕಾರಿ ಚಿತ್ರಕಥೆ ಎನ್ನಬಹುದು,

ಹಾಗಂತ ಇದು ದೆವ್ವದ ಕಥೆಯಲ್ಲ ಮಾಧ್ಯಮ ಜಗತ್ತಿನ ಕೆಲವೊಂದು ಸೂಕ್ಷ್ಮ ವಿಷಯಗಳನ್ನ ಇಲ್ಲಿ ಚೆನ್ನಾಗಿ ತೋರಿಸಲಾಗಿದೆ ಟಿ.ಆರ್.ಪಿ ಗಾಗಿ ಕೆಲಸಗಾರರು ಏನೆಲ್ಲಾ ಕಷ್ಟ ಪಡುತ್ತಾರೆ ಎಂಬುದನ್ನು ತೋರಿಸಲಾಗಿದೆ ಕಥೆ ಇಲ್ಲಿ ನಾಯಕನ ಸುತ್ತಲೇ ಸುತ್ತಿದರು ಎಲ್ಲಿಯೂ ಬೋರ್ ಹೊಡೆಸುವುದಿಲ್ಲಾ ಬಹಳ ರೋಚಕವಾಗಿದೆ,

ಅಶು ಬೆದ್ರ,ಸಂಗೀತಾ ಭಟ್,ಪವನ್ ಕುಮಾರ್ ಮತ್ತು ಅತುಲ್ ಕುಲಕರ್ಣಿ ಅವರ ನಟನೆ ಬಹಳ ಚೆನ್ನಾಗಿದೆ ಎಲ್ಲರ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ,
ನಿರ್ದೇಶಕರಾದ ಅರವಿಂದ್ ಶಾಸ್ತ್ರಿ ಅವರು ಮತ್ತೊಮ್ಮೆ ಗೆದ್ದಿದ್ದಾರೆ ಒಂದೊಳ್ಳೆಯ ಅದ್ಬುತ ಚಿತ್ರವನ್ನ ನೀಡಿದ್ದಾರೆ,

ಒಟ್ಟಾರೆ ಹೇಳಬೇಕು ಎಂದರೆ ಯಾವುದೇ ಅಬ್ಬರ,ಆರ್ಭಟ ಗಳಿಲ್ಲದ ಸೊಗಸಾಗಿ ನಿರೂಪಣೆ ಮಾಡಿರುವ ರೋಚಕಥೆಯ ಸಿನಿಮಾ ಅಳಿದು ಉಳಿದವರು ಎಲ್ಲರೂ ನೋಡಲೇಬೇಕಾದ ಸಿನಿಮಾ ಮರೆಯದೆ ನೋಡಿ ಆನಂದಿಸಿ.

Leave a Reply