ನಮ್_ಟಾಕೀಸ್.ಇನ್ ವಿಮರ್ಶೆ ಮತ್ತು ರೇಟಿಂಗ್

ಚಿತ್ರ – ಭರತ ಬಾಹುಬಲಿ
ತಾರಾಗಣ – ಮಂಜು ಮಾಂಡವ್ಯ, ಚಿಕ್ಕಣ್ಣ
ನಿರ್ದೇಶಕರು – ಮಂಜು ಮಾಂಡವ್ಯ
ಸಂಗೀತ ನಿರ್ದೇಶಕರು – ಮಣಿಕಾಂತ್ ಕದ್ರಿ

ರೇಟಿಂಗ್ – 3.5/5

ವಿಮರ್ಶೆ 👇

ಮಂಜು ಮಾಂಡವ್ಯ ಅವರು ನಿರ್ದೇಶಕರಾದರು ಸಣ್ಣ ಪುಟ್ಟ ಪಾತ್ರಗಳಲ್ಲಿ ಈ ಹಿಂದೆ ನಟಿಸಿದ್ದರು ಆದರೆ ಈ ಬಾರಿ ಅವರು ನಿರ್ದೇಶನದ ಜೊತೆ ಮೊದಲ ಬಾರಿಗೆ ನಾಯಕರಾಗಿಯೂ ನಟಿಸಿದ್ದು ಇವರಿಗೆ ಚಿಕ್ಕಣ್ಣ ಸಾಥ್ ನೀಡಿದ್ದಾರೆ ಆ ಚಿತ್ರವೇ ಭರತ ಬಾಹುಬಲಿ ಅದು ಸದ್ಯ ಬಿಡುಗಡೆಯಾಗಿ ಒಳ್ಳೆಯ ಒಪೆನಿಂಗ್ ಕೂಡ ಪಡೆದುಕೊಂಡಿದೆ ಬನ್ನಿ ಚಿತ್ರ ಹೇಗಿದೆ ತಿಳಿಯೋಣ,

ಹಳ್ಳಿಯಲ್ಲಿ ಇಬ್ಬರು ತರಲೆ ತುಂಡ್ ಹೈಕ್ಳು ಪಾತ್ರದಲ್ಲಿ ಭರತನಾಗಿ ಮಂಜು ಮಾಂಡವ್ಯ ಅವರು ಬಾಹುಬಲಿಯಾಗಿ ಚಿಕ್ಕಣ್ಣ ಅವರು ನಟಿಸಿದ್ದಾರೆ ಈ ಇಬ್ಬರ ತರಲೆ ತಮಾಷೆಯ ಕಾಟವನ್ನ ಊರಿನ ಜನ ಸಹಿಸಿಕೊಳ್ಳುವುದೇ ಕಷ್ಟವಾಗಿರುವಾಗ ಈ ಇಬ್ಬರು ಜೈಲು ಸೇರುತ್ತಾರೆ,

ಮುಂದೆ ಚಿತ್ರದ ನಾಯಕಿ ತನ್ನ ಪೂರ್ವ ಜನ್ಮದ ಬಗ್ಗೆ ತಿಳಿಯಲು ವಿದೇಶದಿಂದ ಬರುತ್ತಾಳೆ ನಂತರ ನಾಯಕಿಗೆ ಭರತ ಬಾಹುಬಲಿ ಹೇಗೆಲ್ಲಾ ಸಹಾಯ ಮಾಡುತ್ತಾರೆ ಎಂಬುವುದೇ ಇಡೀ ಚಿತ್ರದ ಜೀವಾಳ,

ಭರತ ಬಾಹುಬಲಿಯಾಗಿ ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ಅವರ ಕಾಂಬಿನೇಷನ್ ಬಹಳ ಚೆನ್ನಾಗಿ ವರ್ಕ್ ಆಗಿದ್ದು ಪ್ರೇಕ್ಷಕರನ್ನ ರಂಜಿಸುವಲ್ಲಿ ಈ ಜೋಡಿ ಯಶಸ್ವಿಯಾಗಿದೆ ಎನ್ನಬಹುದು ಈ ಇಬ್ಬರ ಕಾಮಿಡಿ ಕಮಾಲ್ ಗೆ ಎಲ್ಲರೂ ಜೈ ಅಂದಿದ್ದಾರೆ,

ನಿರ್ದೇಶಕ ಮಂಜು ಮಾಂಡವ್ಯ ಅವರು ನಿರ್ದೇಶನದ ಜೊತೆ ಈ ಬಾರಿ ನಟನೆಯಲ್ಲೂ ಗೆದ್ದಿದ್ದಾರೆ ಅವರ ಕಾಮಿಡಿ ನಿರೂಪಣೆ, ಅದ್ಬುತ ಡೈಲಾಗ್ ಗಳಿಗೆ ನಿಜಕ್ಕೂ ನಾವು ಮೆಚ್ಚುಗೆ ಸೂಚಿಸಬೇಕು,

ಎಲ್ಲಾ ಕಲಾವಿದರ ನಟನೆ ಬಹಳ ಚೆನ್ನಾಗಿದೆ,ಮಣಿಕಾಂತ್ ಕದ್ರಿ ಅವರ ಸಂಗೀತ ಪರವಾಗಿಲ್ಲ,
ಕೆ.ಎಂ.ಪ್ರಕಾಶ್ ಅವರ ಸಂಕಲನದ ಬಗ್ಗೆ ಹೇಳಬೇಕು ಅಂದರೆ ಅಲ್ಲಲ್ಲಿ ಕೊಂಚ ಕತ್ತರಿ ಪ್ರಯೋಗ ಮಾಡಬಹುದಿತ್ತು ಅನಿಸುತ್ತದೆ,

ಒಟ್ಟಾರೆ ಹೇಳಬೇಕು ಅಂದರೆ ಕೊಟ್ಟ ಕಾಸಿಗೆ ಮೋಸ ಮಾಡದ ಅದ್ಬುತ ಮನರಂಜನಾತ್ಮಕ ಸಿನಿಮಾ ಭರತ ಬಾಹುಬಲಿ ಮಿಸ್ ಮಾಡದೆ ನೋಡಿ ಆನಂದಿಸಿ

Leave a Reply