ನಮ್_ಟಾಕೀಸ್.ಇನ್ ವಿಮರ್ಶೆ ಮತ್ತು ರೇಟಿಂಗ್

ಚಿತ್ರ – ಬ್ರಹ್ಮಚಾರಿ
ತಾರಾಗಣ – ನೀನಾಸಂ ಸತೀಶ್,ಅದಿತಿ ಪ್ರಭುದೇವ,ಶಿವರಾಜ್ ಕೆ.ಆರ್.ಪೇಟೆ,ಅಶೋಕ್,ದತ್ತಣ್ಣ,ಅಚ್ಯುತ್ ಕುಮಾರ್,ಪದ್ಮಜಾ ರಾವ್,ಅಕ್ಷತಾ ಶ್ರೀನಿವಾಸ್
ನಿರ್ಮಾಪಕರು – ಉದಯ್ ಕೆ ಮೆಹ್ತಾ
ನಿರ್ದೇಶನ – ಚಂದ್ರಮೋಹನ್
ಸಂಗೀತ ನಿರ್ದೇಶನ – ಧರ್ಮ ವಿಶ್
ಛಾಯಾಗ್ರಹಣ – ರವಿ.ವಿ

ರೇಟಿಂಗ್ – 3.5/5

ವಿಮರ್ಶೆ 👇

ಈ ವಾರ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆಯಾಗಿದ್ದರು ಕನ್ನಡ ಸಿನಿರಸಿಕರ ಗಮನ ಬ್ರಹ್ಮಚಾರಿ ಚಿತ್ರದ ಮೇಲೆಯೇ ಜಾಸ್ತಿ ಇತ್ತು ಅದಕ್ಕೆ ಕಾರಣವೂ ಇತ್ತು ಆ ಕಾರಣವನ್ನ ಟ್ರೈಲರ್ ಮತ್ತು ಹಾಡುಗಳ ಮೂಲಕ ಬ್ರಹ್ಮಚಾರಿ ಚಿತ್ರ ಕೊಟ್ಟಿತ್ತು ಅಂತೂ ಇಂತೂ ಚಿತ್ರವು ಬಿಡುಗಡೆಯಾಗಿದೆ ಬನ್ನಿ ಚಿತ್ರ ಹೇಗಿದೆ ತಿಳಿಯೋಣ,

ಚಿತ್ರದ ನಾಯಕ ನೀನಾಸಂ ಸತೀಶ್ ಇಲ್ಲಿ ರಾಮನ ಪರಮ ಭಕ್ತ ಅವನಂತೆ ಏಕ ಪತ್ನಿ ವ್ರತಸ್ಥ ಅಪ್ಪಟ ಬ್ರಹ್ಮಚಾರಿ ಮತ್ತು ಒಬ್ಬ ಒಳ್ಳೆಯ ವ್ಯಕ್ತಿ ಸರ್ಕಾರಿ ನೌಕರ ಇವನ ತರ್ಲೆ ಸ್ನೇಹಿತರಾಗಿ ಶಿವರಾಜ್ ಕೆ.ಆರ್.ಪೇಟೆ ಮತ್ತು ಅಶೋಕ್ ಅವರು ಈ ಮೂವರ ಜುಗಲ್ಬಂದಿಯಲ್ಲಿ ಮುಂದೆ ಕಥೆ ಸಾಗುತ್ತದೆ,

ಒಬ್ಬ ಅಪ್ಪಟ ಬ್ರಹ್ಮಚಾರಿ ನೀನಾಸಂ ಸತೀಶ್ ಅವರು ಮದುವೆಯಾಗಲು ನಿರ್ಧಾರ ಮಾಡಿ ಹುಡುಗಿ ಹುಡುಕಲು ಪ್ರಾರಂಭ ಮಾಡುತ್ತಾನೆ ಅವನಿಗೆ ಸ್ನೇಹಿತರು ಸಾಥ್ ನೀಡುತ್ತಾರೆ ಈ ಹುಡುಕಾಟದಲ್ಲಿ ಹುಡುಗಿ ಸಿಗದೆ ಪರದಾಡುವಾಗ ಈ ಮೂವರ ಕಾಂಬಿನೇಷನ್ ಬಹಳ ಮಜಾ ಕೊಡುತ್ತದೆ,

ಇಂತಹ ಬ್ರಹ್ಮಚಾರಿ ಕೂಡ ಲವ್ ನಲ್ಲಿ ಬಿದ್ದು ಮದುವೆ ಕೂಡ ಆಗಿಬಿಡುತ್ತಾನೆ ಇಲ್ಲಿಂದಲೇ ನೋಡಿ ನಿಜವಾದ ಕಥೆ ಆರಂಭ ಮತ್ತು ಡಬಲ್ ಮನರಂಜನೆ ಕೂಡ ಸಿಗುವುದು,
ಇನ್ನೇನು ನಾಯಕ ನಾಯಕಿ ದಾಂಪತ್ಯ ಜೀವನ ಪ್ರಾರಂಭ ಮಾಡುವಷ್ಟರಲ್ಲಿ ಚಿತ್ರದಲ್ಲಿ ಒಂದು ಟ್ವಿಸ್ಟ್ ಸಿಗುತ್ತದೆ ಆ ಸಮಸ್ಯೆಯಿಂದ ನಾಯಕ ಹೇಗೆ ಹೊರಬರುತ್ತಾನೆ ಎಂಬುದೇ ಚಿತ್ರದ ಅಂತ್ಯ,

ಬ್ರಹ್ಮಚಾರಿಯಾಗಿ ನೀನಾಸಂ ಸತೀಶ್ ಅವರ ಅಭಿನಯ ಅದ್ಬುತ,ಅವರಿಗೆ ನಾಯಕಿಯಾಗಿ ಸುನಿತಾ ಪಾತ್ರದಲ್ಲಿ ಅದಿತಿ ಪ್ರಭುದೇವ ಅವರು ಕ್ಯೂಟ್ ಆಗಿ ನಟಿಸಿದ್ದಾರೆ,
ಸ್ನೇಹಿತರಾದ ಶಿವರಾಜ್ ಕೆ.ಆರ್.ಪೇಟೆ ಮತ್ತು ಅಶೋಕ್ ಇಬ್ಬರು ಸಾಕಷ್ಟು ನಗಿಸುತ್ತಾರೆ,
ಅಚ್ಯುತ್ ಕುಮಾರ್,ಪದ್ಮಜಾ ರಾವ್,ದತ್ತಣ್ಣ ಮತ್ತು ಅಕ್ಷತಾ ಶ್ರೀನಿವಾಸ್ ಅವರ ನಟನೆ ಚಿತ್ರಕ್ಕೆ ಪೂರಕವಾಗಿದೆ,

ನಿರ್ದೇಶಕ ಚಂದ್ರಮೋಹನ್ ಅವರು ಪ್ರೇಕ್ಷಕರನ್ನ ರಂಜಿಸುವಲ್ಲಿ ನಿಜಕ್ಕೂ ಯಶಸ್ವಿಯಾಗಿದ್ದಾರೆ ಎನ್ನಬಹುದು,
ಉದಯ್ ಕೆ ಮೆಹ್ತಾ ಅವರು ಒಳ್ಳೆಯ ಅದ್ಬುತ ಮನರಂಜನಾತ್ಮಕ ಸಿನಿಮಾ ನಿರ್ಮಾಣ ಮಾಡಿದ್ದಾರೆ,ಧರ್ಮ ವಿಶ್ ಅವರ ಸಂಗೀತ ಬ್ರಹ್ಮಚಾರಿ ಗೆ ಮತ್ತಷ್ಟು ಶಕ್ತಿ ತುಂಬಿದೆ,ರವಿ ಅವರ ಛಾಯಾಗ್ರಹಣ ಚೆನ್ನಾಗಿದೆ,

ಒಟ್ಟಾರೆ ಹೇಳಬೇಕು ಎಂದರೆ ಬ್ರಹ್ಮಚಾರಿ ಚಿತ್ರ ಪ್ರಾರಂಭದಿಂದ ಅಂತ್ಯದ ತನಕ ಸಾಕಷ್ಟು ಮಜಾ ಕೊಡುತ್ತದೆ ನಗಿಸುತ್ತದೆ ಡಬಲ್ ಮೀನಿಂಗ್ ಡೈಲಾಗ್ ಗಳಿದ್ದರು ಅದರಲ್ಲಿ ಅತಿರೇಕವಿಲ್ಲಾ ಸಂಪೂರ್ಣ ಕುಟುಂಬ ಕೂತು ನೋಡುವುದಕ್ಕೆ ಯಾವುದೇ ಅಡ್ಡಿಯಿಲ್ಲಾ ಮಿಸ್ ಮಾಡದೆ ನೋಡಿ ಆನಂದಿಸಿ

Leave a Reply