ಅನುಕ್ತ‌.ಟ್ರೇಲರ್ ನಲ್ಲೇ ಹೊಸ ಬಗೆಯ ನಂಬಿಕೆಯನ್ನು ಹುಟ್ಟುಹಾಕಿದ ಚಿತ್ರ.ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವನ್ನು ಒಳಗೊಂಡ ಚಿತ್ರ ಸಧ್ಯ ಬಿಡುಗಡೆಯಾಗಿ ಪ್ರೇಕ್ಷಕರನ್ನು ‌ಚಿತ್ರಮಂದಿರದತ್ತ ಸಳೆಯುತ್ತಿರುವುದು ಚಿತ್ರತಂಡದ ಪರಿಶ್ರಮಕ್ಕೆ ಸದಾ ಗೆಲುವು.

ಕನ್ನಡದಲ್ಲಿ ಇಂಥ ಸಸ್ಪೆನ್ಸ್ ಚಿತ್ರಗಳು ಈ ಹಿಂದೆ ಬಂದು ಹೋಗಿರುವುದು ಇದೆ‌.ಕೆಲವೊಂದು ಸೌಂಡ್ ಮಾಡಿದೆ ಇನ್ನೂ ‌ಕೆಲವೊಂದು ಪ್ರೇಕ್ಷಕರ ಅಭಿರುಚಿಗೆ ಹಿಡಿಸಿಲ್ಲ‌.ಅನುಕ್ತ ಚಿತ್ರ ಸದ್ದು ಮಾಡುತ್ತಿರುವ ಹಿಂದೆ ನಿರ್ದೇಶಕ ಅಶ್ವತ್ ಸ್ಯಾಮ್ಯುಲ್ ಮತ್ತು
ಸಿನಿಮಾಟೋಗ್ರಾಫರ್ ಮನೋಹರ್ ಜೋಷಿ ಕ್ಯಾಮರಾ ಕೈಚಳಕದ ಮಾಂತ್ರಿಕತೆ ಅಡಗಿದೆ.

ನಾಯಕ ಕಾರ್ತಿಕ್ ಅತ್ತಾವರ್ ಒಬ್ಬ ತನಿಖಾಧಿಕಾರಿಯಾಗಿ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ಅನು ಪ್ರಭಾಕರ್, ಸಂಗೀತ ಭಟ್,ಸಂಪತ್ ರಾಜ್ ಎಲ್ಲರೂ ಪಾತ್ರಕ್ಕೆ ಜೀವ ತುಂಬಿದ್ದಾರೆ.ನೋಬಿನ್ ಪೌಲ್ ರವರ ಮ್ಯೂಸಿಕ್ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುವ ‌ಕುತೂಹಲಕಾರಿ ಥ್ರಿಲ್ಲರ್ ಮೂವಿಯನ್ನು ನೋಡಲು ವೀಕೆಂಡ್ ಬುಕ್ ಮಾಡ್ಕೋಳಿ.

ಒಳ್ಳೆಯ ಚಿತ್ರಗಳನ್ನು ಬೆನ್ನುತಟ್ಟುವ ಕಾಯಕವನ್ನು ‌ಮೊದಲಿನಿಂದಲೂ ಪ್ರೇಕ್ಷಕರು ಮಾಡುತ್ತಾ ಬರುತ್ತಿದ್ದಾರೆ. ಸಧ್ಯ ಅನುಕ್ತ ಕೂಡ ಈ ಸಾಲಿಗೆ ಸೇರಿದೆ.ಸ್ಯಾಂಡಲ್ ವುಡ್ ಮಾತ್ರವಲ್ಲ ಬಾಲಿವುಡ್ ಪ್ರೇಕ್ಷಕರಿಗೂ ಅನುಕ್ತ ಚಿತ್ರ ಇಷ್ಟವಾಗಿದೆ.ಚಿತ್ರ ವೀಕ್ಷಸಿದ ಬಾಲಿವುಡ್ ನಟ ಸೋನು ಸೊದ್ ಅನುಕ್ತ ಚಿತ್ರ ತಂಡದ ಪ್ರಯತ್ನಕ್ಕೆ ಶಬ್ಬಾಸ್ ಹೇಳಿ ಒಳ್ಳೆಯ ಚಿತ್ರಕ್ಕೆ ಶುಭಾಶಯ ಕೋರಿದ್ದಾರೆ.ಚಿತ್ರ ಇನ್ನಷ್ಟು ಯಶಸ್ಸು ಕಾಣಲಿ ಅನ್ನುವ ಆಶಯ ನಮ್ಮದು.

One Comments

  • AshaArun 06 / 02 / 2019 Reply

    Nice

Leave a Reply