ನಮ್_ಟಾಕೀಸ್.ಇನ್ ವಿಮರ್ಶೆ ಮತ್ತು ರೇಟಿಂಗ್

ಚಿತ್ರ – #ಐ1
ತಾರಾಗಣ -ರಂಜನ್,ಧೀರಜ್ ಮತ್ತು ಕಿಶೋರ್
ನಿರ್ದೇಶಕರು – ಆರ್.ಎಸ್.ರಾಜ್ ಕುಮಾರ್
ನಿರ್ಮಾಪಕರು – ಶೈಲಜಾ ಪ್ರಕಾಶ್
ಛಾಯಾಗ್ರಹಣ – ಷಿನೋಭ್

ರೇಟಿಂಗ್ – 3/5

ವಿಮರ್ಶೆ 👇

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೊಸ ನಿರ್ದೇಶಕರ ಯೋಚನೆಗಳು ನಿಜಕ್ಕೂ ಬಹಳ ಕುತೂಹಲಕಾರಿಯಾಗಿರುತ್ತವೆ ಅಂತಹ ಟ್ಯಾಲೆಂಟ್ ಇರುವ ನಿರ್ದೇಶಕರಿಗೆ ಚಿತ್ರ ಮಾಡಲು ಅವಕಾಶ ಸಿಕ್ಕಿದರೆ ಅದನ್ನ ಹೇಗೆ ಉಪಯೋಗಿಸಿಕೊಂಡು ಅದ್ಬುತವಾದ ಮತ್ತು ಡಿಫರೆಂಟ್ ಚಿತ್ರವನ್ನ ನೀಡುತ್ತಾರೆ ಎಂಬುದಕ್ಕೆ ಇಂದು ಬಿಡುಗಡೆಯಾದ ಐ1 ಚಿತ್ರವೇ ಸಾಕ್ಷಿ,

ಐ1 ಚಿತ್ರದ ಟ್ರೈಲರ್ ನೋಡಿದ ಮೇಲೆ ಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆಗಳು ಬಂದಿದ್ದು ಸಹಜ ಇಂದು ಚಿತ್ರವನ್ನ ನೋಡಿದವರಿಗೆ ಚಿತ್ರ ಚೆನ್ನಾಗಿದೆ ಅನಿಸಿದಿಯಾ ಬನ್ನಿ ನಾವು ಹೇಳ್ತೀವಿ,

ಚಿತ್ರದ ಕಥೆ 20 ಅಡಿ ಆಳದಲ್ಲಿ ಒಂದು ಟಿಟಿ ವ್ಯಾನಿನ ಒಳಗೆ ನಡೆಯುತ್ತದೆ,
ಭ್ರಷ್ಟಾಚಾರ ಮಾಡಿ ಹಣ ಸಂಪಾದಿಸಿದ ಮೂವರು ಖ್ಯಾತ ಉದ್ಯಮಿಗಳ ಮಕ್ಕಳನ್ನ ಅಪಹರಿಸಿ ಮಣ್ಣಿನಾಳದಲ್ಲಿರುವ ಟಿಟಿ ಯಲ್ಲಿ ಕೂಡಿ ಹಾಕಿ ಒಬ್ಬ ಸಾಮಾನ್ಯ ಮನುಷ್ಯ ಟಾರ್ಚರ್ ಕೊಡುತ್ತಿರುತ್ತಾನೆ,
ಆ ಟಿಟಿ ಯಲ್ಲಿ ಒಂದು ಸಿಸಿಟಿವಿ ಕ್ಯಾಮೆರಾ, ಸ್ಪೀಕರ್ ಮೊಬೈಲ್ ಪೋನ್ ಮತ್ತು ಮೊಬೈಲ್‍ನಲ್ಲಿ ಮಾತನಾಡುವ ಕೆಲವು ಪಾತ್ರಗಳು ಮಾತ್ರ ಇರುತ್ತವೆ,

ಅಷ್ಟಕ್ಕೂ ಆ ಮೂವರು ಉದ್ಯಮಿಗಳು ಯಾರು ?
ಅವರ ಮಕ್ಕಳು ಏನು ತಪ್ಪು ಮಾಡಿದರು?
ಅಪಹರಣ ಮಾಡಲು ಕಾರಣವೇನು ?
ಅಪಹರಣ ಮಾಡುವವರು ಯಾರು ?
ಅವರನ್ನ ಮಣ್ಣಿನಾಳದಲ್ಲಿ ಟಿಟಿ ಯಲ್ಲೇ ಯಾಕೆ ಕೂಡಿ ಹಾಕುತ್ತಾನೆ ?
ಕೊನೆಗೆ ಚಿತ್ರದ ಅಂತ್ಯ ಹೇಗಾಗುತ್ತದೆ ಈ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ನೀವು ಉತ್ತರ ಪಡೆಯಲು ಈ ಅದ್ಭುತವಾದ ಐ1 ಚಿತ್ರವನ್ನ ನೋಡಲೇಬೇಕು,

ಕೇವಲ ಒಂದು ಟಿಟಿ ವ್ಯಾನ್ ನಲ್ಲೇ ಇಷ್ಟೊಂದು ಥ್ರಿಲ್ಲಿಂಗ್ ಆಗಿ ಚಿತ್ರ ಮಾಡಬಹುದು ಅಂತಾ ತೋರಿಸಿದ ನಿರ್ದೇಶಕ ರಾಜ್ ಕುಮಾರ್ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು ಮತ್ತು ಇವರಿಗೆ ಸಂಪೂರ್ಣ ಬೆಂಬಲ ನೀಡಿದ ನಿರ್ಮಾಪಕರಾದ ಶೈಲಜಾ ಪ್ರಕಾಶ್ ಅವರಿಗೂ ಮೆಚ್ಚುಗೆ ಕೊಡಲೇಬೇಕು,
ಇನ್ನು ಚಿತ್ರದ ಮತ್ತೊಂದು ಮೇಜರ್ ಪ್ಲಸ್ ಪಾಯಿಂಟ್ ಅದು ಷಿನೋಭ್ ಅವರ ಛಾಯಾಗ್ರಹಣ ಕೇವಲ ಒಂದು ಟಿಟಿ ವ್ಯಾನ್ ನಲ್ಲೇ ಇಡೀ ಚಿತ್ರವನ್ನ ಸೆರೆಹಿಡಿದು ಪ್ರೇಕ್ಷಕರಿಗೆ ಇಷ್ಟವಾಗುವ ಹಾಗೆ ತೋರಿಸುವುದು ಎಂದರೆ ತಮಾಷೆಯ ವಿಷಯವೇನಲ್ಲ,

ಇನ್ನು ಮುಖ್ಯ ಪಾತ್ರದಲ್ಲಿ ನಟಿಸಿರುವ ರಂಜನ್,ಧೀರಜ್ ಮತ್ತು ಕಿಶೋರ್ ಅವರ ನಟನೆ ಮನೋಘ್ನವಾಗಿದೆ,
ಒಟ್ಟಾರೆ ಹೇಳಬೇಕು ಎಂದರೆ ಮಾಮೂಲಿ ಸಿನಿಮಾಗಳನ್ನ ನೋಡಿ ಬೇಸತ್ತಿರುವ ಪ್ರೇಕ್ಷಕರಿಗೆ ಐ1 ಸಿನಿಮಾ ಖಂಡಿತ ವಿಶೇಷ ಎನಿಸುತ್ತದೆ ಮಿಸ್ ಮಾಡದೆ ನೋಡಿ ಆನಂದಿಸಿ ಇಂತಹ ಹೊಸ ಪ್ರಯತ್ನವನ್ನ ಪ್ರೋತ್ಸಾಹಿಸಿ ಗೆಲ್ಲಿಸಿ.

Leave a Reply