ಕೆಮಿಸ್ಟ್ರಿ ಆಫ್ ಕರಿಯಪ್ಪ ಕ್ಯಾಚಿ ಟೈಟಲ್ ಹಿಟ್ಕೊಂಡು ಪ್ರೇಕ್ಷಕರನ್ನು ‌ಮೋಡಿ ಮಾಡೋಕೆ ಬರುತ್ತಿದ್ದಾರೆ ಕಿರಿಕ್ ಪಾರ್ಟಿ ಖ್ಯಾತಿಯ ಚಂದನ್ ಆಚಾರ್.

ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ನಿರ್ದೇಶಕ ಕುಮಾರ್ ,ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿರುವವರು ಡಾ.ಮಂಜುನಾಥ್ ಡಿ.ಎಸ್.
ಟ್ರೈಲರ್ ನಲ್ಲೇ ಹೊಸ ಭರವಸೆ ಮೂಡಿಸಿರುವ ಚಿತ್ರ.ಕಿರಿಕ್ ಪಾರ್ಟಿಯಲ್ಲಿ ಫ್ರೆಂಡ್ಸ್ ಸರ್ಕಲ್ ನಲ್ಲಿ ತನ್ನ ನಟನೆಯ ಛಾಪನ್ನು ಹೊಳಪಿಸಿರುವ ಚಂದನ್.ಮೊದಲ ಸಲಿ ನಾಯಕನಾಗಿ ಕಾಣಿಸಿಕೊಳ್ಳಲಿರುವ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ.

ಚಂದನ್ ನೊಟ್ಟಿಗೆ ಚಿತ್ರದಲ್ಲಿ ಡ್ಯುಯೆಟ್ ಹಾಡಲಿದ್ದಾರೆ ನಾಯಕಿ ಸಂಜನ.ಚಿತ್ರದಲ್ಲಿ
ತಬಲ ನಾಣಿ ಹಾಸ್ಯದೊಟ್ಟಿಗೆ ತಂದೆಯ ಪಾತ್ರದಲ್ಲಿ ಜವಾಬ್ದಾರಿಯುತವಾಗಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಟ್ರೈಲರ್ ಯೊಟ್ಟಿಗೆ ಹಾಡುಗಳು ಹಿಟ್ ಯಾಗಿದ್ದು ನವೀನ್ ಸಜ್ಜು ಹಾಡಿರುವ,ಕುಮಾರ್ ಸಾಹಿತ್ಯ ಇರುವ ಊರ್ವಶಿ ಇವಳು ಹಾಡು ಕೇಳಲು ಟಪ್ಪಾಗುಚ್ಚಿಯಾಗಿದ್ದು ಪಡ್ಡೆ ಹುಡುಗರು ಮೆಚ್ಚುವುದು ಗ್ಯಾರೆಂಟಿ.

ಅಂದಹಾಗೆ ತಬಲ‌ ನಾಣಿ ಮತ್ತವರ ಫ್ಯಾಮಿಲಿ ತಮ್ಮ ವ್ಯಥೆ ಹೇಳಲು ಇದೇ ತಿಂಗಳ 15 ರಂದು ‌ನಿಮ್ಮ ಮುಂದೆ ಬರುತ್ತಾ‌ ಇದ್ದಾರೆ ಕೇಳಲು ರೆಡಿಯಾಗಿರಿ.

One Comments

  • AshaArun 08 / 02 / 2019 Reply

    Good luck

Leave a Reply