ಕನ್ನಡ ಚಿತ್ರರಂಗದ ಮತ್ತೊಂದು ಮಹೋನ್ನತ ಚಿತ್ರದ ಬಗ್ಗೆ ಲೇಟೆಸ್ಟ್ ಸುದ್ದಿ ಹೊರಬಿದ್ದಿದೆ ಹೌದು ಡಿ ಬಾಸ್ ದರ್ಶನ್ ಅವರ ಒಡೆಯ ಬಿಡುಗಡೆಗೆ ಸಿದ್ಧವಾಗಿದೆ ರಾಬರ್ಟ್ ಶೂಟಿಂಗ್ ಹಂತದಲ್ಲಿದೆ ಇವೆರಡರ ನಂತರ ಮುಂದಿನ ಸಿನಿಮಾ ಗಂಡುಗಲಿ ಮದಕರಿ ನಾಯಕ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಇದೀಗ ದಿನಾಂಕ ನಿಗಧಿಯಾಗಿದೆ,

ಸ್ಯಾಂಡಲ್ ವುಡ್ ನ ದೊಡ್ಡ ನಿರ್ಮಾಪಕರಾದ ಧೀರ ರಾಕ್ ಲೈನ್ ವೆಂಕಟೇಶ್ ಅವರ ಅದ್ದೂರಿ ನಿರ್ಮಾಣದಲ್ಲಿ ಮದಕರಿ ಸಿನಿಮಾ ಮೂಡಿಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಮತ್ತು ಈ ಚಿತ್ರಕ್ಕೆ ಹಿರಿಯ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನ,ಲೆಜೆಂಡ್ ಹಂಸಲೇಖ ಅವರ ಸಂಗೀತ ನಿರ್ದೇಶನ ಇರಲಿದೆ,
ಖ್ಯಾತ ಬರಹಗಾರ ಬಿ.ಎಲ್.ವೇಣು ಅವರು ಬರೆದಿರುವ ಪುಸ್ತಕದ ಬೇಸ್ ಮೇಲೆ ಈ ಗಂಡುಗಲಿ ಮದಕರಿ ನಾಯಕ ಚಿತ್ರ ಮೂಡಿಬರಲಿದೆ,

ಈ ಅದ್ದೂರಿ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಇರುವುದರಿಂದ ಚಿತ್ರ ಯಾವಾಗ ಪ್ರಾರಂಭವಾಗಲಿದೆ ಎಂದು ಕನ್ನಡ ಸಿನಿರಸಿಕರು ಕಾಯುತ್ತಿದ್ದರು ಇದೀಗ ಚಿತ್ರದ ಮುಹೂರ್ತ ಕಾರ್ಯಕ್ರಮ ಡಿಸೆಂಬರ್ 2 ರಂದು ಬಹಳ ಅದ್ದೂರಿಯಗಿ ನಡೆಯಲಿದ್ದು ಎಲ್ಲರಿಗೂ ಖಂಡಿತ ಇದು ಖುಷಿಯ ವಿಷಯ ಎನ್ನಬಹುದು,
ಸಂಗೊಳ್ಳಿ ರಾಯಣ್ಣ ಮತ್ತು ಕುರುಕ್ಷೇತ್ರ ಚಿತ್ರಗಳ ನಂತರ ಡಿ ಬಾಸ್ ಮತ್ತೊಂದು ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಖಂಡಿತ ಮದಕರಿ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಒಂದು ಮೈಲಿಗಲ್ಲಾಗುತ್ತದೆ ಕಾದು ನೋಡೋಣ.

Leave a Reply