ಸ್ಯಾಂಡಲ್ ವುಡ್ ನಲ್ಲಿ ಹುಲಿ ಹೆಸರಿನ ಹಲವಾರು ಚಿತ್ರಗಳು ಬಂದು ಹೋಗಿವೆ ಈಗ ಆ ಪಟ್ಟಿಗಳಿಗೆ ಹೊಸ ಸೇರ್ಪಡೆಯಾಗಿ ಬಿಡುಗಡೆಗೆ ಸಜ್ಜಾಗಿದೆ #ಟೈಗರ್_ಗಲ್ಲಿ ಎನ್ನುವ ವಿಶಿಷ್ಟವಾದ ಟೈಟಲ್ ನ ಮಾಸ್ ಚಿತ್ರ,

ಅಂದಹಾಗೆ ಈ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ಡೆಡ್ಲಿ ಡೈರೆಕ್ಟರ್ ರವಿ ಶ್ರೀವತ್ಸ ಅವರು ಸಾಕಷ್ಟು ಸಮಯ ತೆಗೆದುಕೊಂಡು ಬಹಳ ಅಚ್ಚು ಕಟ್ಟಾಗಿ ಈ ಚಿತ್ರವನ್ನ ಮಾಡಿ ಮುಗಿಸಿದ್ದಾರೆ ಬಹಳ ದೊಡ್ಡ ಬಿಡುವಿನ ನಂತರ ಒಂದು ಖಡಕ್ ಮಾಸ್ ಚಿತ್ರ ಅವರ ಬತ್ತಳಿಕೆಯಿಂದ ತಾಯಾರಾಗಿದೆ,

ಇನ್ನು ಈ ಚಿತ್ರಕ್ಕೆ ಯೋಗೇಶ್ ಎಂಬ ಹೊಸ ನಿರ್ಮಾಪಕರು ಬಂಡವಾಳ ಹೂಡಿದ್ದು ಜೊತೆಗೆ ಪೊಲೀಸ್ ಪಾತ್ರವೊಂದಕ್ಕೆ ಅವರು ಬಣ್ಣ ಕೂಡ ಹಚ್ಚಿದ್ದಾರೆ, ಬಹಳ ಅದ್ದೂರಿಯಾಗಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ,

ಅಭಿನಯ ಚತುರ ನೀನಾಸಂ ಸತೀಶ್ ಮೊದಲ ಬಾರಿಗೆ ಮಾಸ್ ಗೆಟಪ್ ನಲ್ಲಿ ಮಿಂಚಿರುವ ಚಿತ್ರ #ಟೈಗರ್_ಗಲ್ಲಿ,
ಇದರಲ್ಲಿ ಸಾಕಷ್ಟು ವಿಭಿನ್ನ ಅವತಾರಗಳಲ್ಲಿ ಮಿಂಚಿದ್ದಾರೆ,

ನಾಯಕಿಯರಾಗಿ ರೋಷಿಣಿ ಮತ್ತು ಭಾವನಾ ರಾವ್ ಅವರು ಕಾಣಿಸಿಕೊಂಡಿದ್ದು ಇವರಲ್ಲದೇ ಇನ್ನು ಹಲವಾರು ದೊಡ್ಡ ದೊಡ್ಡ ಕಲಾವಿದರು ಈ ಚಿತ್ರದಲ್ಲಿ ಅಭಿನಹಿಸಿದ್ದಾರೆ,

ಚಿತ್ರೀಕರಣದ ಮುಗಿಸಿರುವ ಚಿತ್ರತಂಡ ಸದ್ಯ ಚಿತ್ರದ ಧ್ವನಿಸುರುಳಿಯನ್ನ ಬಿಡುಗಡೆ ಮಾಡಿದೆ,
ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದ್ದು ಎಲ್ಲಾ ಹಾಡುಗಳು ಕೇಳುಗರ ಮನವನ್ನ ಈಗಾಗಲೇ ಗೆಲ್ಲುತ್ತಿವೆ,

ಇನ್ನೇನು #ಟೈಗರ್_ಗಲ್ಲಿ ಚಿತ್ರ ತೆರೆಗೆಬರಲು ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದು ಅತೀ ಶೀಘ್ರದಲ್ಲೇ ಬಿಡುಗಡೆಯಾಗಿ ಪ್ರೇಕ್ಷಕರನ್ನ ರಂಜಿಸಲಿದೆ…

Leave a Reply