ಸ್ಯಾಂಡಲ್ ವುಡ್ ನಲ್ಲಿ ಗರುಡ ಎಂಬ ಹೆಸರು ಸದ್ಯ ಬಹಳ ಫೇಮಸ್ ಆಗಿದೆ ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಎಫ್ ನ ಗರುಡ ಪಾತ್ರ ಎಲ್ಲರಿಗೂ ಬಹಳ ಇಷ್ಟವಾಗಿತ್ತು ಆದರೆ ಈ ಪಾತ್ರ ತೆರೆಮೇಲೆ ಬರುವುದಕ್ಕೂ ಮೊದಲೇ ಗರುಡ ಹೆಸರಿನ ಸಿನಿಮಾ ಸೆಟ್ಟೇರಿತ್ತು ಸದ್ದಿಲ್ಲದೆ ಚಿತ್ರೀಕರಣವನ್ನು ಮಾಡಿತ್ತು ಬನ್ನಿ ಆ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳಿ,

ಸಿದ್ಧಾರ್ಥ್ ಮಹೇಶ್ ಮತ್ತು ಶ್ರೀನಗರ ಕಿಟ್ಟಿ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಗರುಡ ಚಿತ್ರದ ಚಿತ್ರೀಕರಣ ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು ಆದರೆ ಏನು ಕಾರಣವೋ ಬಿಡುಗಡೆಯಾಗುವುದು ಸ್ವಲ್ಪ ತಡವಾದರು ಅದ್ಭುತವಾದ ಟ್ರೈಲರ್ ಒಂದನ್ನ ಚಿತ್ರತಂಡ ಇದೀಗ ಬಿಡುಗಡೆ ಮಾಡಿದೆ,

ಟ್ರೈಲರ್ ನೋಡಲು ಬಹಳ ಕುತೂಹಲಕಾರಿಯಾಗಿದ್ದು ಕನ್ನಡ ಸಿನಿರಸಿಕರಲ್ಲಿ ಒಂದಷ್ಟು ನಿರೀಕ್ಷೆಗಳನ್ನ ಹುಟ್ಟು ಹಾಕಿದೆ ಸ್ವತಃ ನಾಯಕರಾದ ಸಿದ್ಧಾರ್ಥ್ ಮಹೇಶ್ ಅವರೇ ಕಥೆ ಚಿತ್ರಕಥೆ ಮಾಡಿದ್ದು ಧನ ಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ,
ರಘು ದೀಕ್ಷಿತ್ ಅವರ ಸಂಗೀತ ನಿರ್ದೇಶನ,ಜೈ ಆನಂದ್ ಅವರ ಛಾಯಾಗ್ರಹಣ, ರವಿ ವರ್ಮ,ವಿನೋದ್ ಮತ್ತು ವಿಕ್ರಂ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ,

ಗರುಡ ಚಿತ್ರದಲ್ಲಿ ನಾಯಕರಾಗಿ ಸಿದ್ಧಾರ್ಥ್ ಮಹೇಶ್,ಶ್ರೀನಗರ ಕಿಟ್ಟಿ ನಟಿಸಿದ್ದು ಇವರಿಗೆ ಜೊತೆಯಾಗಿ ಆಶಿಕಾ ರಂಗನಾಥ್,ಐಂದ್ರಿತಾ ರೇ,ಕಾಮ್ನ ಜೇಠ್ಮಲಾನಿ ಕಾಣಿಸಿಕೊಂಡಿದ್ದಾರೆ,
ಇವರಲ್ಲದೆ ಚಿತ್ರದಲ್ಲಿ ಬಹಳಷ್ಟು ಜನ ಹೆಸರಾಂತ ಕಲಾವಿದರು ನಟಿಸಿದ್ದು ಇದು ಚಿತ್ರದ ತೂಕವನ್ನ ಮತ್ತಷ್ಟು ಹೆಚ್ಚಿಸಿದೆ,

ಇಷ್ಟು ದಿನ ಸದ್ದಿಲ್ಲದೆ ಚಿತ್ರೀಕರಣ ಮಾಡಿ ಇದೀಗ ಟ್ರೈಲರ್ ಮೂಲಕ ಒಂದೇ ಸಾರಿ ಎಲ್ಲೆಡೆ ಸುದ್ದಿಯಾಗಿರುವ #ಗರುಡ ಸಿನಿಮಾ ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಚಿತ್ರತಂಡದ ಮೇಲಿರಲಿ.

Leave a Reply