ಜಾಗ್ವಾರ್ ಚಿತ್ರದ ಮೂಲಕ ನಾಯಕರಾಗಿ ಬಹಳ ಅದ್ದೂರಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅವರು ಮೊದಲನೇ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾದ ಮೇಲೆ ಸ್ವಲ್ಪ ಬಿಡುವಿನ ನಂತರ ಸಾಕಷ್ಟು ಕಥೆಗಳನ್ನ ಕೇಳಿ ಕೊನೆಗೆ ಬಹದ್ದೂರ್ ಚಿತ್ರದ ಖ್ಯಾತಿಯ ಚೇತನ್ ಕುಮಾರ್ ಅವರ ಕಥೆಯನ್ನ ಒಪ್ಪಿ ಈಗ ಎರಡನೇ ಚಿತ್ರದ ಸ್ಕ್ರಿಪ್ಟ್ ಪೂಜೆ ಕೂಡ ನಡೆದಿದೆ,

ಈ ಚಿತ್ರಕ್ಕೆ ಕುಮಾರಸ್ವಾಮಿ ಅವರೇ ನಿರ್ಮಾಣ ಮಾಡುತ್ತಿದ್ದು ಈ ಚಿತ್ರ ಅವರ ನಿರ್ಮಾಣದ 7 ನೇ ಚಿತ್ರವಾಗಲಿದೆ ಇನ್ನು ಬಹದ್ದೂರ್ ಚೇತನ್ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ,ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದು,ಹರ್ಷ ಮತ್ತು ಇಮ್ರಾನ್ ಸರ್ದಾರಿಯ ನೃತ್ಯ ಸಂಯೋಜನೆ ಮಾಡಲಿದ್ದಾರೆ ಇನ್ನುಳಿದಂತೆ ಬಹುತೇಕ ಎಲ್ಲಾ ಕನ್ನಡದ ತಂತ್ರಜ್ಞರೇ ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ,

ಇನ್ನು ಹೆಸರಿಡದ ಈ ಚಿತ್ರಕ್ಕೆ ಜೂನ್ ಮೊದಲನೇ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು ಈ ವರ್ಷದ ಕೊನೆಯಲ್ಲಿ ಚಿತ್ರವನ್ನ ತೆರೆಗೆ ತರಬೇಕು ಎಂಬುದು ನಿರ್ದೇಶಕರ ಮಾತು,
ಸದ್ಯ ಚಿತ್ರದ ನಾಯಕಿ ಮತ್ತು ಉಳಿದ ತಾರಾಗಣ,ತಂತ್ರಜ್ಞರ ಹುಡುಕಾಟದಲ್ಲಿದೆ ಚಿತ್ರತಂಡ….

Leave a Reply