ನವರಸ ನಾಯಕ ಜಗ್ಗೇಶ್ ಅವರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಹಲವಾರು ಚಿತ್ರಗಳನ್ನ ನಿರ್ಮಿಸಿದ್ದಾರೆ ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ ಮತ್ತು ಎರಡು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ ಆ ಚಿತ್ರಗಳು ಗುರು ಮತ್ತು ಮೇಲಕೋಟೆ ಮಂಜ ಇದೀಗ ಜಗ್ಗಣ್ಣ ಮತ್ತೆ ನಿರ್ದೇಶಕರಾಗಲು ಹೊರಟಿದ್ದಾರೆ ಆ ಚಿತ್ರದ ಬಗ್ಗೆ ಬ್ರೇಕಿಂಗ್ ಮಾಹಿತಿ ಇಲ್ಲಿದೆ ಓದಿ,

100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು ಜಗ್ಗೇಶ್ ಅವರು ಮೊದಲ ನಿರ್ದೇಶನ ಮಾಡಲು ಮನಸ್ಸು ಮಾಡಿದ್ದು ಅವರ ಪುತ್ರ ಗುರುರಾಜ್ ಜಗ್ಗೇಶ್ ಅವರಿಗೆ ಅದು ಗುರು ಚಿತ್ರ ಮತ್ತೆ ಎರಡನೇ ಸಿನಿಮಾ ಮೇಲಕೋಟೆ ಮಂಜದಲ್ಲಿ ಸ್ವತಃ ಜಗ್ಗೇಶ್ ಅವರೇ ನಾಯಕರಾಗಿ ನಟಿಸಿದ್ದರು ಆದರೆ ಈ ಎರಡು ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲವಾದರು ಪ್ರೇಕ್ಷಕರಿಗೆ ರಂಜಿಸುವಲ್ಲಿ ಯಶಸ್ವಿಯಾಗಿದ್ದವು,

ಜಗ್ಗಣ್ಣ ಇದೀಗ ಮೂರನೇ ಚಿತ್ರವನ್ನ ನಿರ್ದೇಶನ ಮಾಡಲು ಸಿದ್ಧವಾಗಿದ್ದು ಇದರಲ್ಲಿ ಕೋಮಲ್ ಮತ್ತು ಗುರುರಾಜ್ ಅವರು ನಟಿಸಲಿದ್ದಾರೆ ಎಂಬ ಮಾಹಿತಿ ನಮಗೆ ಸದ್ಯಕ್ಕೆ ಲಭ್ಯವಾಗಿದೆ,

ಈ ಹೊಸ ಚಿತ್ರದ ಕಥೆ ಒಂದು ರಾತ್ರಿ ನಡೆಯುವಂತದ್ದು ಅಲ್ಲಿ ಇಬ್ಬರು ಬೇರೆ ಬೇರೆ ಮನಸ್ಥಿತಿಯ ವ್ಯಕ್ತಿಗಳು ಅನಿವಾರ್ಯವಾಗಿ ಒಟ್ಟಿಗೆ ಇರುವ ಪರಿಸ್ಥಿತಿ ಎದುರಾಗುತ್ತದೆ ಇದರಲ್ಲಿ ಒಂದು ಸೀರಿಯಸ್ ಪಾತ್ರ ಮತ್ತು ಮತ್ತೊಂದು ಕಾಮಿಡಿ ಟಚ್ ಇರುವ ಪಾತ್ರ ಎಂದು ಜಗ್ಗಣ್ಣ ಅವರು ತಿಳಿಸಿದ್ದಾರೆ,

ಈ ಸಿನಿಮಾದ ಟೈಟಲ್ ಸದ್ಯದಲ್ಲೇ ಚಿತ್ರತಂಡ ತಿಳಿಸಲಿದ್ದು ಸದ್ಯಕ್ಕೆ ಮೊದಲು ಒಂದು ಟೀಸರ್ ಗಾಗಿ ಶೂಟ್ ಮಾಡುವ ಪ್ಲಾನ್ ಮಾಡಿಕೊಂಡಿದೆ ಮತ್ತು ಚಿತ್ರೀಕರಣ ಮುಂದಿನ ವರ್ಷದಿಂದ ಪ್ರಾರಂಭವಾಗಲಿದೆ

Leave a Reply