ಚಿತ್ರರಂಗ ಎಂದಾಗ ನೆನಪಾಗೋದು ಯಶಸ್ಸು, ಹಣ , ಹೆಸರು ಮಾಡಲೆತ್ನಿಸುವ ಹಲವಾರು ನಟರುಳ್ಳ ಇಂಡಸ್ಟ್ರಿ.
ಆದರೆ ಇಲ್ಲೊಬ್ಬ ಯುವ ನಟ ಸಿನಿಮಾ ಪ್ರೀತಿಗಾಗಿ, ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕೆನ್ನುವ ಛಲ ಹೊತ್ತು ಬಂದಿದ್ದಾರೆ .
ಇವರು ಇನ್ನ್ಯಾರು ಅಲ್ಲ ಉತ್ತರ ಕರ್ನಾಟಕದ ಹುಲಿ ನಟ ” ಅಭಯ್ “
ಬಾಲ್ಯದಿಂದಲೇ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ತಮ್ಮ ಆದರ್ಶವನ್ನಾಗಿಟ್ಟುಕೊಂಡು ಬೆಳೆದವರು .
ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಯ್ ಚಿತ್ರ ನೋಡಿದ ನಂತರ ತಮ್ಮ ಹೆಸರನ್ನು ಅಭಯ್ ಎಂದು ಬದಲಾಯಿಸಿ ಕೊಳ್ಳುವ ಮಟ್ಟಿಗೆ ದರ್ಶನ್ ರವರ ಮೇಲಿನ ಅಭಿಮಾನ.


ಕನ್ನಡ ಚಿತ್ರರಂಗಕ್ಕೆ ಸನಿಹ ಚಿತ್ರದ ಮೂಲಕ ಪಾದಾರ್ಪಣೆ ಮಾಡಿರುವ ಅಭಯ್ ಈಗಾಗಲೇ ಹಲವಾರು ಚಿತ್ರಗಳ ಮೂಲಕ , ತಮ್ಮ ಮನೋಜ್ಞ ಅಭಿನಯದ ಮೂಲಕ ಸಿನಿರಸಿಕರ ಮನಗೆದ್ದಿದ್ದಾರೆ.
ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ, ಸಿನಿರಂಗದಲ್ಲಿ ಒಬ್ಬರೇ ಏನಾದರೂ ಸಾಧಿಸಬೇಕೆಂಬ ಛಲ ಹೊತ್ತು ಹೋರಾಡುತ್ತಿರುವ ಅಭಯ್ ರವರ ಪ್ರಯತ್ನಕ್ಕೆ ನಾವು ಪ್ರೋತ್ಸಾಹ ನೀಡಲೇಬೇಕು.
ನೋವು ಯುವ ಕಲಾವಿದರಿಗೆ ನೀಡುವ ಪ್ರೋತ್ಸಾಹ ಎಷ್ಟು ಪ್ರಮುಖವಾದದ್ದು ಎಂಬುದು, ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ರವರ ನಿಧನದ ನಂತರ ಎಲ್ಲರಿಗೂ ಅರಿವಾಗಿದೆ.


ಅಭಯ್ ಉತ್ತಮ ನಟನಾಗಿರದೇ, ಸ್ನೇಹಜೀವಿ ಕೂಡ ಹೌದು.
ತಾನು ಹೀರೋ ಪಾತ್ರಕ್ಕೆ ಮಾತ್ರಕ್ಕೆ ಸೀಮಿತವಾಗಿಲ್ಲ, ಉತ್ತಮ ಪಾತ್ರಗಳಿಗೆ ನನ್ನ ಮೊದಲ ಆದ್ಯತೆ ಎನ್ನುತ್ತಾರೆ ನಟ ಅಭಯ್.
ಈಗಾಗಲೇ ಅಭಯ್ ರವರ 3 ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿದೆ.
ಇದೇ ಜೂನ್ 24 ರಂದು ಅಭಯ್ ರವರ ಜನ್ಮದಿನ. ಚಿತ್ರರಂಗದಲ್ಲಿ ಒಂದು ಹೊಸ ಬದಲಾವಣೆಯ ಕನಸನ್ನು ಹೊತ್ತು ಬಂದಿರುವ ಅಭಯ್ ರವರ ಆಶಾಗೋಪುರ ಉನ್ನತ ಮಟ್ಟದಲ್ಲಿ ಬೆಳಗಲೆಂದು ಆಶಿಸೋಣ .

Leave a Reply