ನಮ್_ಟಾಕೀಸ್.ಇನ್ ವಿಮರ್ಶೆ ಮತ್ತು ರೇಟಿಂಗ್

ಚಿತ್ರ – #ಅವನೇ_ಶ್ರೀಮನ್ನಾರಾಯಣ
ತಾರಾಗಣ – ರಕ್ಷಿತ್ ಶೆಟ್ಟಿ,ಶಾನ್ವಿ ಶ್ರೀವತ್ಸ, ಅಚ್ಯುತ್ ಕುಮಾರ್,ಪ್ರಮೋದ್ ಶೆಟ್ಟಿ,ಬಾಲಾಜಿ ಮನೋಹರ್,ಮಧುಸೂಧನ್ ರಾವ್
ನಿರ್ದೇಶಕರು – ಸಚಿನ್
ನಿರ್ಮಾಪಕರು – ಪುಷ್ಕರ ಮಲ್ಲಿಕಾರ್ಜುನ್,ಎಚ್.ಕೆ.ಪ್ರಕಾಶ್
ಛಾಯಾಗ್ರಹಣ – ಕರ್ಮ್ ಚಾವ್ಲ
ಸಂಗೀತ ಮತ್ತು ಹಿನ್ನಲೆ ಸಂಗೀತ – ಅಜನೀಶ್ ಲೋಕನಾಥ್,ಚರಣ್ ರಾಜ್

ರೇಟಿಂಗ್ – 3.75/5

ವಿಮರ್ಶೆ 👇

ಸ್ಯಾಂಡಲ್ ವುಡ್ ನಲ್ಲಿ ಬಹಳ ನಿರೀಕ್ಷೆ ಮೂಡಿಸಿದ್ದ ಸಿನಿಮಾ 3 ವರ್ಷಗಳ ಕಠಿಣ ಪರಿಶ್ರಮದ ಪ್ರತಿಫಲ #ಅವನೇ_ಶ್ರೀಮನ್ನಾರಾಯಣ ಸಿನಿಮಾ ವಿಶ್ವದಾದ್ಯಂತ ಇಂದು ಬಿಡುಗಡೆಯಾಗಿದೆ ಈ ಚಿತ್ರ ಎಲ್ಲಾ ವರ್ಗದ ಸಿನಿರಸಿಕರು ಕಾತುರದಿಂದ ಕಾಯುತ್ತಿದ್ದ ಸಿನಿಮಾ ಹೇಗಿದೆ ಬನ್ನಿ ತಿಳಿಯೋಣ,

ಅವನೇ ಶ್ರೀಮನ್ನಾರಾಯಣ ಸಿನಿಮಾ ಅಮರಾವತಿ ಎನ್ನುವ ಒಂದು ಕಲ್ಪನಾ ಲೋಕದ ಫ್ಯಾಂಟಸಿ ಜಾಗದಲ್ಲಿ ನಡೆಯುವ ಕಥೆ ಈ ಕಥೆ ಪ್ರಾರಂಭವಾಗುವುದು ಲೂಟಿಯ ಹೆಸರಿನಿಂದಲೇ ಮತ್ತು ಮುಗಿವುದು ಅದೇ ಕಾರಣದಿಂದಲೇ ಇದು ಇಡೀ ಚಿತ್ರದ ಕೆಂದ್ರ ಬಿಂದು ಎಂದರೆ ತಪ್ಪಾಗಲಾರದು,

ತಂದೆ ಸತ್ತ ನಂತರ ಅವನ ಜಾಗದಲ್ಲಿ ಕೂರಲು ಮಕ್ಕಳಾದ ಜಯರಾಮ ತುಕರಾಮ ಇಬ್ಬರ ನಡುವೆ ಜಗಳ ಕೊನೆಗೆ ತಂದೆ ಹುಡುಕುತ್ತಿದ್ದ ಲೂಟಿಯನ್ನ ಹುದುಕಿದವರಿಗೆ ಆ ಜಾಗ ಎಂದು ಫಿಕ್ಸ್ ಆದಮೇಲೆ ಇವರಿಬ್ಬರ ನಡುವೆ ಮತ್ತೊಬ್ಬನ್ನ ಎಂಟ್ರಿ ಆಗುತ್ತದೆ ಅವನೇ ಶ್ರೀಮನ್ನಾರಾಯಣ ರಕ್ಷಿತ್ ಶೆಟ್ಟಿ ಇವನಿಗೆ ಜೋಡಿಯಾಗಿ ಲಕ್ಷ್ಮಿ ಶಾನ್ವಿ ಶ್ರೀವತ್ಸ ಅವರು,

ಈ ಲೂಟಿ ಹುಡುಕುತ್ತ ಹೊರಡುವ ಜಯರಾಮ ತುಕರಾಮ ಮತ್ತು ನಾರಾಯಣರಿಗೆ ಸಿಗುವ ಕುರುಹುಗಳೇನು ಆ ಲೂಟಿ ಕೊನೆಗೆ ಯಾರಿಗೆ ಸಿಗುತ್ತದೆ ಅಷ್ಟಕ್ಕೂ ಆ ಲೂಟಿಯಾದರು ಎಂದು ಎಂಬುದೇ ಇಡೀ ಚಿತ್ರದಲ್ಲಿ ಪ್ರೇಕ್ಷಕರನ್ನ ಹಿಡಿದಿಡುವ ಬಹಳ ಕುತೂಹಲಕಾರಿ ಚಿತ್ರಕಥೆ,

ಇಡೀ ಚಿತ್ರದಲ್ಲಿ ನಾರಾಯಣ,ಲಕ್ಷ್ಮಿ, ಅಭೀರ,ಜಯರಾಮ,ತುಕರಾಮ,ಅಚ್ಯುತ್ತಣ್ಣ ಪಾತ್ರಗಳು ಬಹಳ ಪ್ರಾಮುಖ್ಯತೆ ಪಡೆದುಕೊಂಡಿವೆ ಈ ಪತ್ರಗಳಲ್ಲಿ ರಕ್ಷಿತ್ ಶೆಟ್ಟಿ,ಶಾನ್ವಿ ಶ್ರೀವತ್ಸ,ಬಾಲಾಜಿ ಮನೋಹರ್,ಪ್ರಮೋದ್ ಶೆಟ್ಟಿ,ಅಚ್ಯುತ್ ಕುಮಾರ್ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ,

ಇಡೀ ಸಿನಿಮಾ ಒಂದು ದೃಶ್ಯ ವೈಭವದಂತೆ ಕಾಣುತ್ತದೆ ಇಡೀ ಚಿತ್ರದ ಮೇಕಿಂಗ್,ಕ್ವಾಲಿಟಿ,ಕ್ಯಾಮರಾ ವರ್ಕ್,ಎಡಿಟಿಂಗ್ ಎಲ್ಲವೂ ಅದ್ಭುತವಾಗಿದೆ ಚಿತ್ರ ನೋಡುವವರಿಗೆ ಅಬ್ಬಾ ಎಂಥ ಸುಂದರ ಅನುಭವ ಅನ್ನುವ ಮಟ್ಟಿಗೆ ಇಡೀ ಚಿತ್ರ ಮೂಡಿಬಂದಿರುವುದು ಎಲ್ಲಾ ವರ್ಗದ ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು,

ನಟನೆಯ ವಿಚಾರಕ್ಕೆ ಬಂದರೆ ರಕ್ಷಿತ್ ಶೆಟ್ಟಿ ಅವರು ಇಡೀ ಚಿತ್ರದಲ್ಲಿ ಅಮೋಘ ಅಭಿನಯ ನೀಡಿದ್ದಾರೆ ನಾರಾಯಣನಾಗಿ ಕಿಲಾಡಿ ಪೊಲೀಸ್ ಆಗಿ ಪ್ರೇಕ್ಷಕರನ್ನ ನಗಿಸುತ್ತಾರೆ ಬಹಳ ಥ್ರಿಲ್ ನೀಡುತ್ತಾರೆ,ಶಾನ್ವಿ ಶ್ರೀವತ್ಸ ಅವರ ಲಕ್ಷ್ಮಿ ಪಾತ್ರ ಬಹಳ ಚೆನ್ನಾಗಿದೆ,
ಜಯರಾಮ ತುಕಾರಾಮರಾಗಿ ಬಾಲಾಜಿ ಮನೋಹರ್,ಪ್ರಮೋದ್ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ ಇನ್ನುಳಿದ ಎಲ್ಲಾ ಪಾತ್ರಗಳಿಗೂ ಅಷ್ಟೇ ಮಹತ್ವವಿದ್ದು ಎಲ್ಲರೂ ಅಷ್ಟೇ ಚೆನ್ನಾಗಿ ನಟಿಸಿದ್ದಾರೆ,

ನಿರ್ದೇಶಕ ಸಚಿನ್ ಅವರ ಬಗ್ಗೆ ಹೇಳಲೇ ಬೇಕು ಮೊದಲ ಚಿತ್ರದಲ್ಲೆ ಇಂತಹ ಮೈಲಿಗಲ್ಲಾಗುವ ಚಿತ್ರವನ್ನ ನೀಡಿರುವುದು ಮತ್ತು ಸಂಕಲನ ಕೂಡ ಮಾಡಿರುವುದು ಅವರೊಬ್ಬ ಸೂಪರ್ ಡೈರೆಕ್ಟರ್ ಎನ್ನುವುದನ್ನ ತೋರಿಸುತ್ತದೆ,
ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನ ಅವರು ಇಡೀ ಚಿತ್ರವನ್ನ ಬಹಳ ರಿಚ್ ಆಗಿ ತೋರಿಸಿದ್ದಾರೆ,

ಅಜನೀಶ್ ಲೋಕನಾಥ್ ಮತ್ತು ಚರಣ್ ರಾಜ್ ಅವರ ಸಂಗೀತ ಹಾಗೂ ಹಿನ್ನಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿವೆ,
ಕರ್ಮ್ ಚಾವ್ಲ ಅವರ ಛಾಯಾಗ್ರಹಣ ಇಡೀ ಚಿತ್ರವನ್ನ ಬಹಳ ಕಲರ್ ಫುಲ್ ಆಗಿ ತೋರಿಸಿದೆ ಇಡೀ ಚಿತ್ರಕ್ಕೆ ಕೆಲಸ ಮಾಡಿರುವ ತಾಂತ್ರಿಕ ವರ್ಗದ ಶ್ರಮ ಚಿತ್ರವನ್ನ ನೋಡಿದಾಗ ಎಲ್ಲರಿಗೂ ತಿಳಿಯುತ್ತದೆ,

ಒಟ್ಟಾರೆ ಹೇಳಬೇಕು ಎಂದರೆ ಅವನೇ ಶ್ರೀಮನ್ನಾರಾಯಣ ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲೆ ಹೊಸದೊಂದು ಇತಿಹಾಸ ಬರೆಯುವುದು ಪಕ್ಕಾ ಎನ್ನಬಹುದು ಮಿಸ್ ಮಾಡದೆ ನಮ್ಮ ಕನ್ನಡದ ಈ ಹೆಮ್ಮೆಯ ಸಿನಿಮಾವನ್ನ ಕುಟುಂಬ ಸಮೇತರಾಗಿ ಬಂದು ನೋಡಿ.

Leave a Reply