ನಮ್_ಟಾಕೀಸ್ ವಿಮರ್ಶೆ ಮತ್ತು ರೇಟಿಂಗ್

ಚಿತ್ರ – ಶಿವಾಜಿ ಸುರತ್ಕಲ್
ತಾರಾಗಣ – ರಮೇಶ್ ಅರವಿಂದ್,ರಾಧಿಕಾ ನಾರಾಯಣ್, ಆರೋಹಿ ನಾರಾಯಣ್
ನಿರ್ದೇಶಕರು – ಆಕಾಶ್ ಶ್ರೀವತ್ಸ
ಛಾಯಾಗ್ರಹಣ – ಗುರುಪ್ರಸಾದ್.ಎಂ.ಜಿ
ನಿರ್ಮಾಪಕರು – ರೇಖಾ.ಕೆಎನ್ ಮತ್ತು ಅನೂಪ್ ಗೌಡ
ಸಂಗೀತ ನಿರ್ದೇಶಕರು – ಜುದಃ ಸ್ಯಾಂಡಿ

ರೇಟಿಂಗ್ – 4/5

ವಿಮರ್ಶೆ 👇

ಸಾಮಾನ್ಯವಾಗಿ ಥ್ರಿಲ್ಲರ್ ಚಿತ್ರಗಳು ನೋಡಲು ಬಹಳ ಚೆನ್ನಾಗಿರುತ್ತವೆ ಆದರೆ ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಕ್ರೈಮ್ ಅಥವಾ ಹಾರರ್ ಥ್ರಿಲ್ಲರ್ ಚಿತ್ರಗಳು ಎಲ್ಲಾ ಒಂದೇ ಶೈಲಿಯಲ್ಲಿ ಮೂಡಿಬರುತ್ತಿರುವುದು ಬೇಸರದ ಸಂಗತಿ ಈ ಬೇಸರವನ್ನ ಹೋಗಲಾಡಿಸಲು ಇಂದು ಬಿಡುಗಡೆಯಾಗಿರುವ ಮತ್ತೊಂದು ಥ್ರಿಲ್ಲರ್ ಚಿತ್ರ ಶಿವಾಜಿ ಸುರತ್ಕಲ್ ಯಶಸ್ವಿಯಾಗಿದಿಯಾ ಎಂಬುದನ್ನ ತಿಳಿಯೋಣ ಬನ್ನಿ,

ಎವರ್ ಗ್ರೀನ್ ಯಂಗ್ ಹೀರೋ ರಮೇಶ್ ಅರವಿಂದ್ ಅವರು ಪುಷ್ಪಕ ವಿಮಾನ ಅಂತಹ ಎಮೋಷನಲ್ ಚಿತ್ರದ ನಂತರ ಮಾಡಿರುವ ಥ್ರಿಲ್ಲರ್ ಸಿನಿಮಾ ಶಿವಾಜಿ ಸುರತ್ಕಲ್ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಒಳ್ಳೆಯ ಒಪೆನಿಂಗ್ ಕೂಡ ಪಡೆದುಕೊಂಡಿದೆ,
ರಣಗಿರಿ ಎಂಬ ರೆಸಾರ್ಟ್ ನಲ್ಲಿ ಮಂತ್ರಿ ಮಗನೊಬ್ಬನ ಕೊಲೆಯಾಗುತ್ತದೆ ಈ ಕೊಲೆಯ ತನಿಖೆ ಮಾಡಲು ರಮೇಶ್ ಅರವಿಂದ್ ಅವರು ಶಿವಾಜಿ ಸುರತ್ಕಲ್ ಪಾತ್ರದಲ್ಲಿ ಎಂಟ್ರಿ ಆಗುತ್ತದೆ,

ಶಿವಾಜಿ ಸುರತ್ಕಲ್ ಒಬ್ಬ ಚಾಣಾಕ್ಷ ಅಧಿಕಾರಿ ಅವನು ತನಿಖೆ ಮಾಡುತ್ತಿರುವ 101 ನೇ ಕೇಸು ಈ ರಣಗಿರಿ ರೆಸಾರ್ಟ್ ನ ಮಂತ್ರಿ ಕೇಸು ಅವನ ತನಿಖಾ ಜೀವನದಲ್ಲೇ ಎಂದು ನೋಡಿರದ ಎದುರಿಸದ ಈ ಕೇಸನ್ನ ಶಿವಾಜಿ ಹೇಗೆ ನಿಭಾಯಿಸುತ್ತಾನೆ ಎಂಬುದು ಬಹಳ ರೋಚಕವಾಗಿ ಮೂಡಿಬಂದಿದೆ,

ಈ ಚಿತ್ರ ಮಾಮೂಲಿ ಕ್ರೈಮ್ ಥ್ರಿಲ್ಲರ್ ಕಥೆಗಳಂತೆ ಸಾಗುವುದಿಲ್ಲಾ ಅನೇಕ ಏರಿಳಿತಗಳು ಚಿತ್ರಕಥೆಯಲ್ಲಿ ಕಾಣ ಸಿಗುತ್ತದೆ ಕ್ರೈಮ್ ಥ್ರಿಲ್ಲರ್ ಜೊತೆಗೆ,ಹಾರರ್ ಮತ್ತು ಎಮೋಷನಲ್ ಅಂಶಗಳನ್ನ ಬಹಳ ಸೊಗಸಾಗಿ ಚಿತ್ರಕಥೆಯಲ್ಲಿ ನಿರ್ದೇಶಕರು ಬೆರೆಸಿರುವುದು ಶಿವಾಜಿ ಸುರತ್ಕಲ್ ಚಿತ್ರವನ್ನ ನೋಡುವವರಿಗೆ ಇದೊಂದು ಡಿಫರೆಂಟ್ ಥ್ರಿಲ್ಲರ್ ಸಿನಿಮಾ ಎನ್ನುವಂತೆ ಮಾಡುತ್ತದೆ,

ಇಡೀ ಚಿತ್ರದುದ್ದಕ್ಕೂ ರಮೇಶ್ ಅರವಿಂದ್ ಅವರ ಪಾತ್ರ ಸಾಗುತ್ತದೆ ಮತ್ತು ಅಷ್ಟೇ ಅದ್ಭುತವಾಗಿ ಮನೋಘ್ನವಾಗಿ ಅವರು ನಟಿಸಿದ್ದಾರೆ,
ಬೇರೆ ಪಾತ್ರಗಳು ಚಿಕ್ಕದಾದರೂ ಎಲ್ಲಾ ಪಾತ್ರಗಳು ಬಹಳ ಮುಖ್ಯವಾಗಿವೆ ಮತ್ತು ಎಲ್ಲಾ ಪಾತ್ರಧಾರಿಗಳು ಅದ್ಭುತವಾಗಿ ನಟಿಸಿದ್ದಾರೆ,

ಚಿತ್ರದ ಮತ್ತೊಬ್ಬ ಹೀರೋ ಎಂದರೆ ಅದು ನಿರ್ದೇಶಕರಾದ ಆಕಾಶ್ ಶ್ರೀವತ್ಸ ಅವರು ಹೌದು ನಿಜಕ್ಕೂ ಅವರ ನಿರ್ದೇಶನ ಇಲ್ಲಿ ಬಹಳ ಸೊಗಸಾಗಿದೆ ಚಿತ್ರದ ಬಹಳ ರೋಚಕವಾಗಿ ಮೂಡಿಬರಲು ಅವರ ಚಿತ್ರಕಥೆ ಮತ್ತು ನಿರ್ದೇಶನ ಪ್ರಮುಖ ಕಾರಣ ಎನ್ನಬಹುದು,

ಗುರುಪ್ರಸಾದ್ ಅವರ ಛಾಯಾಗ್ರಹಣ,ಜುದಃ ಸ್ಯಾಂಡಿ ಅವರ ಸಂಗೀತ ಮತ್ತು ಶ್ರೀಕಾಂತ್ ಅವರ ಸಂಕಲನ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿವೆ ಎನ್ನಬಹುದು,

ಒಟ್ಟಾರೆ ಹೇಳಬೇಕು ಎಂದರೆ ಶಿವಾಜಿ ಸುರತ್ಕಲ್ ಮಾಮೂಲಿ ಎನಿಸುವಂತಹ ಥ್ರಿಲ್ಲರ್ ಚಿತ್ರವಲ್ಲ ಹೊಸ ಫೀಲಿಂಗ್ ಕೊಡುವ ಡಿಫರೆಂಟ್ ಥ್ರಿಲ್ಲರ್ ಸಿನಿಮಾ ಪ್ರಾರಂಭದಿಂದ ಅಂತ್ಯದ ತನಕ ಸೀಟಿನ ತುದಿಯಲ್ಲೇ ಕೂತು ಚಿತ್ರ ನೋಡುವಂತಹ ಚಿತ್ರವಿದು ಮರೆಯದೆ ಕುಟುಂಬ ಸಮೇತರಾಗಿ ಹೋಗಿ ನೋಡಿ ಆನಂದಿಸಿ.

Leave a Reply