ಸ್ಯಾಂಡಲ್ ವುಡ್ ನಲ್ಲಿ ಪ್ರಖ್ಯಾತ ಲೇಖಕರಲ್ಲಿ ಸಾಹಿತಿಗಳಲ್ಲಿ ಕವಿರಾಜ್ ಅವರು ಸಹ ಒಬ್ಬರು ಅವರಿಗೆ ನಿರ್ದೇಶನದಲ್ಲೂ ಬಹಳ ಆಸಕ್ತಿಯಿದೆ ಎಂಬುದು ಎಲ್ಲರಿಗೂ ಗೊತ್ತು ಅವರ ಮೊದಲ ಸಿನಿಮಾ ಮಧುವೆಯ ಮಮತೆಯ ಕರೆಯೋಲೆ ಅಷ್ಟೊಂದು ಯಶಸ್ಸು ಕಾಣಲಿಲ್ಲ ಇದೀಗ ಅವರ ನಿರ್ದೇಶನದ ಎರಡನೇ ಸಿನಿಮಾ ಕಾಳಿದಾಸ ಕನ್ನಡ ಮೇಷ್ಟ್ರು ಇದೇ 22 ರಂದು ಬಿಡುಗಡೆಗೆ ಸಿದ್ಧವಾಗಿದೆ,

ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಮತ್ತು ಮೇಘನಾ ಗಾವ್ನ್ಕರ್ ಅವರು ಜೋಡಿಯಾಗಿ ನಟಿಸಿದ್ದು ಜಗ್ಗಣ್ಣ ಇಲ್ಲಿ ಕನ್ನಡ ಮೇಷ್ಟ್ರು ಪಾತ್ರಕ್ಕೆ ಜೀವ ತುಂಬಿದ್ದಾರೆ ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಸಹ ಬಿಡುಗಡೆಯಾಗಿವೆ,

ಟ್ರೈಲರ್ ನೋಡಿದರೆ ತಿಳಿಯುತ್ತದೆ ಇದೊಂದು ಪಕ್ಕಾ ಭರಪೂರ ಮನರಂಜನೆ ನೀಡುವ ಸಿನಿಮಾ ಎಂದು ನಿರ್ದೇಶಕ ಕವಿರಾಜ್ ಅವರು ಈ ಬಾರಿ ಮನರಂಜನೆಗೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟು ಪ್ರೇಕ್ಷಕರರನ್ನ ನಗಿಸಲು ಬಹಳ ಶ್ರಮವಹಿಸಿ ಚಿತ್ರವನ್ನ ಮಾಡಿದ್ದಾರೆ ಜಗ್ಗಣ್ಣ ಇಲ್ಲಿ ಫ್ರೆಶ್ ಲುಕ್ ನಲ್ಲಿ ಮಿಂಚಿದ್ದು ಕಾಳಿದಾಸನ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ,

ಇದೇ 22 ರಂದು ರಾಜ್ಯಾದ್ಯಂತ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಬಿಡುಗಡೆಯಾಗುತ್ತಿದ್ದು ಮಿಸ್ ಮಾಡದೇ ನೋಡಿ ಆನಂದಿಸಿ ಅಪ್ಪಟ ಕನ್ನಡ ಸೊಗಡಿನ ಸಿನಿಮಾ ಇದು ಮರೆಯದೆ ನೋಡಿ ಗೆಲ್ಲಿಸಿ.

Leave a Reply