ನಮ್_ಟಾಕೀಸ್.ಇನ್ ವಿಮರ್ಶೆ ಮತ್ತು ರೇಟಿಂಗ್

ರೇಟಿಂಗ್ – 3.5/5

ಚಿತ್ರ – ಕನ್ನಡ್_ಗೊತ್ತಿಲ್ಲ
ತಾರಾಗಣ – ಹರಿಪ್ರಿಯಾ,ಸುಧಾರಾಣಿ,ಮಯೂರ ರಾಘವೇಂದ್ರ,ಧರ್ಮಣ್ಣ,ಪವನ್
ನಿರ್ದೇಶಕರು – ಮಯೂರ ರಾಘವೇಂದ್ರ
ನಿರ್ಮಾಪಕರು – ಕುಮಾರ ಕಂಠೀರವ
ಸಂಗೀತ ನಿರ್ದೇಶನ – ನಕುಲ್ ಅಭಯಂಕರ್

ವಿಮರ್ಶೆ 👇

ಇಂದು ಚಂದನವನದಲ್ಲಿ ಬಿಡುಗಡೆಯಾಗಿರುವ ಚಿತ್ರಗಳ ಪೈಕಿ ವಿಭಿನ್ನವಾದ ಕಥಾಹಂದರವಿರುವ ಸಿನಿಮಾ ಕನ್ನಡ್ ಗೊತ್ತಿಲ್ಲ ಎನ್ನಬಹುದು ಟೈಟಲ್ ಮತ್ತು ಟ್ರೈಲರ್ ಮೂಲಕ ಬಹಳ ಕುತೂಹಲ ಹುಟ್ಟಿಸಿದ್ದ ಸಿನಿಮಾ ಕೊನೆಗೂ ಇಂದು ಬಿಡುಗಡೆಯಾಗಿದೆ ಬನ್ನಿ ಚಿತ್ರ ಹೇಗಿದೆ ತಿಳಿಯೋಣ,

ಕನ್ನಡ್ ಗೊತ್ತಿಲ್ಲ ಅಂತಾ ಟೈಟಲ್ ಕೇಳಿದಾಗಲೇ ಇದು ಕನ್ನಡ ಭಾಷೆಗೆ ಸಂಬಂದ ಚಿತ್ರ ಎಂಬುದು ತಿಳಿಯುತ್ತದೆ ಅದಕ್ಕೆ ತಕ್ಕಂತೆ ಚಿತ್ರದ ಕಥೆಯು ಇದೇ,
ಕನ್ನಡದ ಸುತ್ತಲೂ ನಡೆಯುವ ಕಥೆಗೆ ಕ್ರೈಮ್ ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಅಂಶಗಳನ್ನ ಇಲ್ಲಿ ಸೇರಿಸಲಾಗಿದೆ,

ಕ್ಯಾಬ್ ಚಾಲಕ ನಾಗಿ ಇಲ್ಲಿ ಧರ್ಮಣ್ಣ ನಟಿಸಿದ್ದು ಅಪ್ಪಟ ಕನ್ನಡದ ಭಕ್ತರಾಗಿ ನಟಿಸಿದ್ದಾರೆ ಇವರ ಕ್ಯಾಬ್ ನಲ್ಲಿ ಕನ್ನಡ್ ಗೊತ್ತಿಲ್ಲ ಅಂದವರೆಲ್ಲ ಅಪಹರಣವಾಗುತ್ತಾರೆ,
ಕೆಲವು ಸರಣಿ ಕೊಲೆಗಳು ಸಹ ನಡೆಯುತ್ತವೆ ಇದನ್ನ ಪತ್ತೆ ಹಚ್ಚಲು ಪೊಲೀಸ್ ಅಧಿಕಾರಿಯಾಗಿ ಹರಿಪ್ರಿಯಾ ಅವರು ಶ್ರುತಿ ಪಾತ್ರದಲ್ಲಿ ಎಂಟ್ರಿ ಆಗುತ್ತಾರೆ,

ಕನ್ನಡ್ ಗೊತ್ತಿಲ್ಲ ಅಂದವರ ಅಪಹರಣ,ಕೊಲೆಗಳು ಇದಕ್ಕೆ ಕಾರಣ ಅದೇ ಕ್ಯಾಬ್ ಚಾಲಕನ,ಕನ್ನಡ್ ಗೊತ್ತಿಲ್ಲ ಅಂದಿದ್ದಕ್ಕೆ ಅವರ ಅಪಹರಣವಾಯಿತ,ಕೊಲೆಗಾರ ಯಾರು ಅವನ ಉದ್ದೇಶ ಏನು ಇನ್ನು ಮುಂತಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ನೀವು ಚಿತ್ರವನ್ನೇ ನೋಡಬೇಕು,

ಒಳ್ಳೆಯ ಕಥೆ ಇದ್ದರು ಕ್ರೈಮ್ ಥ್ರಿಲ್ಲರ್ ಅಂದರು ಇಲ್ಲಿ ಕೊಂಚ ರೋಚಕಥೆಯ ಸ್ಪರ್ಶ ಮಿಸ್ ಆಗಿದೆ ಎನ್ನಬಹುದು ನಿರ್ದೇಶಕ ಮಯೂರ ರಾಘವೇಂದ್ರ ಅವರ ನಿರ್ದೇಶನ ಮೆಚ್ಚುವಂತದ್ದೇ,
ಕುಮಾರ ಕಂಠೀರವ ಅವರ ಅದ್ಬುತ ನಿರ್ಮಾಣ ಚಿತ್ರವನ್ನ ಬಹಳ ಕ್ವಾಲಿಟಿಯಾಗಿ ತೆರೆಮೇಲೆ ತಂದಿದೆ,
ಗಿರಿಧರ್ ದಿವಾನ್ ಅವರ ಸಂಕಲನ ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು ಅನಿಸುತ್ತದೆ,
ನಕುಲ್ ಅಭಯಂಕರ್ ಅವರ ಸಂಗೀತ ಚಿತ್ರಕ್ಕೆ ಪೂರಕವಾಗಿದೆ,

ಇನ್ನು ನಟನೆಯ ವಿಷಯಕ್ಕೆ ಬಂದರೆ ಹರಿಪ್ರಿಯಾ ಅವರು ತುಂಬಾ ಚೆನ್ನಾಗಿ ನಟಿಸಿದ್ದಾರೆ ಪವರ್ ಫುಲ್ ಡೈಲಾಗ್ಸ್ ಗಳನ್ನು ಹೊಡೆದಿದ್ದಾರೆ ಆದರೂ ಪೊಲೀಸ್ ಪಾತ್ರದಲ್ಲಿ ಅವರ ನಟನೆ ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು ಅನಿಸುತ್ತದೆ,
ಸ್ವತಃ ನಿರ್ದೇಶಕರಾದ ಮಯೂರ ರಾಘವೇಂದ್ರ ಅವರು ಪಾತ್ರ ಮಾಡಿದ್ದಾರೆ,
ಸುಧಾರಾಣಿ ಅವರು ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ,
ಧರ್ಮಣ್ಣ ಅವರ ಕಾಮಿಡಿ ಪವನ್ ಅವರ ಎಮೋಷನಲ್ ದೃಶ್ಯಗಳು ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್ ಎನ್ನಬಹುದು,

ಒಟ್ಟಾರೆ ಹೇಳಬೇಕು ಎಂದರೆ ಚಿತ್ರದ ಕಥೆ ಉದ್ದೇಶ ಎರಡು ಚೆನ್ನಾಗಿದೆ ಸ್ವಲ್ಪ ತಾಳ್ಮೆಯಿಂದ ಚಿತ್ರವನ್ನ ನೋಡಿದರೆ ಕನ್ನಡ್ ಗೊತ್ತಿಲ್ಲ ಪಕ್ಕಾ ನಿಮ್ಮನ್ನು ಖುಷಿ ಪಡಿಸುತ್ತದೆ ಮಿಸ್ ಮಾಡದೆ ನೋಡಿ ಆನಂದಿಸಿ.

Leave a Reply