ನಮ್_ಟಾಕೀಸ್.ಇನ್ ವಿಮರ್ಶೆ ಮತ್ತು ರೇಟಿಂಗ್

ಚಿತ್ರ – ಜಂಟಲ್ ಮನ್
ತಾರಾಗಣ – ಪ್ರಜ್ವಲ್ ದೇವರಾಜ್,ನಿಷ್ವಿಕಾ ನಾಯ್ಡು,ಸಂಚಾರಿ ವಿಜಯ್
ನಿರ್ದೇಶಕರು – ಜಡೇಶ್ ಕುಮಾರ್
ನಿರ್ಮಾಪಕರು – ಗುರು ದೇಶಪಾಂಡೆ
ಸಂಗೀತ ನಿರ್ದೇಶಕರು – ಅಜನೀಶ್ ಲೋಕನಾಥ್

ರೇಟಿಂಗ್ – 4/5

ವಿಮರ್ಶೆ 👇

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಅಭಿನಯದ ಹೊಸ ಚಿತ್ರ #ಜಂಟಲ್_ಮನ್ ಬಿಡುಗಡೆಯಾಗಿ ಒಳ್ಳೆಯ ಒಪೆನಿಂಗ್ ಕೂಡ ಪಡೆದುಕೊಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ಬನ್ನಿ ಚಿತ್ರ ಹೇಗಿದೆ ಎಂದು ತಿಳಿಯೋಣ,

ದಿನಕ್ಕೆ ಬರೋಬ್ಬರಿ 18 ಗಂಟೆ ನಿದ್ದೆ ಮಾಡುವ ಕುಂಬಕರ್ಣ ಭರತ್ ಪಾತ್ರದಲ್ಲಿ ನಾಯಕರಾಗಿ ಪ್ರಜ್ವಲ್ ದೇವರಾಜ್ ಅವರು ನಟಿಸಿದ್ದು ಇವರಿಗೆ ಜೋಡಿಯಾಗಿ ನಿಷ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ,
ನಾಯಕ ಎದ್ದಿರುವುದು ಕೇವಲ 6 ಗಂಟೆ ಮಾತ್ರ ಇಷ್ಟೇ ಸಮಯದಲ್ಲಿ ಅವನು ಕೆಲಸ,ಕುಟುಂಬ,ಪ್ರೀತಿ ಹೀಗೆ ಎಲ್ಲವನ್ನು ಹೇಗೊ ಸರಿದೂಗಿಸಿಕೊಂಡು ಹೋಗುತ್ತಿರುತ್ತಾನೆ,

ಮೊದಲೇ ನಿದ್ರೆ ಸಮಸ್ಯೆಯಿಂದ ಬಳಲುತ್ತಿರುವ ನಾಯಕ ಜೀವನದಲ್ಲಿ ವಿಲನ್ ಗಳ ಎಂಟ್ರಿ ಆಗುತ್ತದೆ ನಂತರ ಅನೇಕ ಸಮಸ್ಯೆಗಳು ನಾಯಕನಿಗೆ ಎದುರಾಗುತ್ತವೆ ಆದರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅವನಿಗೆ ನಿದ್ದೆ ಬರುತ್ತದೆ ಈ ಎಲ್ಲಾ ಸಮಸ್ಯೆಗಳನ್ನ ಎದುರಿಸಿ ಮೆಟ್ಟಿನಿಂತು ನಾಯಕ ಹೇಗೆ ತನ್ನ ಕುಟುಂಬವನ್ನ ಕಾಪಡಿಕೊಳ್ಳುತ್ತಾನೆ ಎನ್ನುವುದೇ ಚಿತ್ರದಲ್ಲಿ ಬಹಳ ಕುತೂಹಲಕಾರಿ ಅಂಶ,

ನಾಯಕ ತನ್ನ ಕುಟುಂಬದ ಪುಟ್ಟ ಜೀವ ವರು ಪಾತ್ರಧಾರಿ ಆರಾಧ್ಯಳಿಗೆ ಎದುರಾಗುವ ದೊಡ್ಡ ಸಮಸ್ಯೆಯನ್ನ ಹೇಗೆ ಪರಿಹಾರ ಮಾಡುತ್ತಾನೆ ಆ ಪುಟ್ಟ ಹುಡುಗಿಯನ್ನ ಹೇಗೆ ಜೋಪಾನ ಮಾಡುತ್ತಾನೆ ಎಂಬುದನ್ನ ಚಿತ್ರದಲ್ಲಿ ಬಹಳ ರೋಚಕವಾಗಿ ತೋರಿಸಲಾಗಿದೆ,
ಜಂಟಲ್ ಮನ್ ಚಿತ್ರದಲ್ಲಿ ಅನೇಕ ವಿಷಯಗಳನ್ನ ಚಿತ್ರದ ಕಥೆಯಲ್ಲಿ ಅಳವಡಿಸಿಕೊಂಡಿದ್ದು ಅದರಲ್ಲಿ ನಾಯಕನ ನಿದ್ರಾ ರೋಗ ಮತ್ತು ಹೆಣ್ಣಿನ ಅಂಡಾಣು ಮಾರಾಟ ದಂಧೆ ಪ್ರಮುಖವಾಗಿದೆ,

ಇನ್ನು ನಟನೆಯ ವಿಷಯಕ್ಕೆ ಬಂದರೆ ನಾಯಕ ಪ್ರಜ್ವಲ್ ದೇವರಾಜ್ ಅವರದ್ದು ಕ್ಲಾಸ್ ಹಾಗೂ ಮಾಸ್ ಶೇಡ್ ಗಳಲ್ಲಿ ಡೈನಾಮಿಕ್ ಆಗಿ ನಟಿಸಿದ್ದಾರೆ,
ಪೊಲೀಸ್ ಪಾತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ಸಂಚಲನ ಮೂಡಿಸಿದ್ದಾರೆ,
ಪುಟ್ಟ ಹುಡುಗಿ ಆರಾಧ್ಯ ಅದ್ಭುತವಾಗಿ ನಟಿಸಿದ್ದಾರೆ,ನಾಯಕಿ ನಿಷ್ವಿಕಾ ನಾಯ್ಡು ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ,
ಖಳನಟರಾಗಿ ನಟಿಸಿರುವ ಎಲ್ಲರೂ ಚೆನ್ನಾಗಿ ನಟಿಸಿದ್ದು ಇದು ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲಿ ಒಂದು,

ಜಡೇಶ್ ಚಿತ್ರಕಥೆ ಮತ್ತು ನಿರ್ದೇಶನ ಇಡೀ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಎನ್ನಬಹುದು ಅಷ್ಟೊಂದು ಚೆನ್ನಾಗಿ ಇಡೀ ಚಿತ್ರವನ್ನ ತೆರೆಮೇಲೆ ತೋರಿಸಿದ್ದಾರೆ,
ಅಜನೀಶ್ ಲೋಕನಾಥ್ ಅವರ ಸಂಗೀತದ ಹಾಡುಗಳು ಚಿತ್ರಕ್ಕೆ ಪೂರಕವಾಗಿವೆ,

ಚಿತ್ರದ ಪ್ರಾರಂಭದಿಂದಲೂ ಡಿ ಬಾಸ್ ದರ್ಶನ್ ಅವರು ಜಂಟಲ್ ಮನ್ ಚಿತ್ರಕ್ಕೆ ಬಹಳ ಪ್ರೋತ್ಸಾಹ ನೀಡಿದ್ದಾರೆ ಇಂತಹ ಒಳ್ಳೆಯ ಚಿತ್ರಗಳನ್ನ ಪ್ರೇಕ್ಷಕರಿಗೆ ತಲುಪಿಸಲು ಅವರ ಪಾತ್ರವೂ ಬಹಳ ಮುಖ್ಯವಾಗಿದೆ ಎಂಬುದನ್ನ ಇಲ್ಲಿ ನಾವು ಸ್ಮರಿಸಬೇಕು,

ಈಗಾಗಲೇ ಚಿತ್ರದ ರಿಮೇಕ್ ಹಕ್ಕುಗಳಿಗೆ ಬಹಳ ಬೇಡಿಕೆ ಬಂದಿದ್ದು ಇದು ಚಿತ್ರ ಹೇಗಿದೆ ಎಂಬುದನ್ನು ಹೇಳುತ್ತದೆ,
ಮೂಲಗಳ ಪ್ರಕಾರ ತಮಿಳಿನಲ್ಲಿ ಜಯಂ ರವಿ ಅಥವಾ ವಿಜಯ್ ಸೇತುಪತಿ ಅವರು ನಾಯಕರಾಗಿ ನಟಿಸಲಿದ್ದಾರೆ,

ಒಟ್ಟಾರೆ ಹೇಳಬೇಕು ಎಂದರೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರಿಗೆ ಜಂಟಲ್ ಮನ್ ಸಿನಿಮಾ ದೊಡ್ಡ ಬ್ರೇಕ್ ನೀಡುವ ಎಲ್ಲಾ ಲಕ್ಷಣಗಳು ಚಿತ್ರದಲ್ಲಿ ಕಾಣುತ್ತಿವೆ ಒಂದೊಳ್ಳೆಯ ಅದ್ಬುತ ಸಿನಿಮಾ ಮಿಸ್ ಮಾಡದೆ ಕುಟುಂಬ ಸಮೇತರಾಗಿ ಹೋಗಿ ನೋಡಿ ಆನಂದಿಸಿ

Leave a Reply