ನಮ್_ಟಾಕೀಸ್.ಇನ್ ವಿಮರ್ಶೆ ಮತ್ತು ರೇಟಿಂಗ್

ಚಿತ್ರ – ಆಯುಷ್ಮಾನ್ ಭವ
ತಾರಾಗಣ – ಶಿವರಾಜ್ ಕುಮಾರ್,ರಚಿತಾ ರಾಮ್,ಅನಂತ್ ನಾಗ್,ಶಿವಾಜಿ ಪ್ರಭು,ಸುಹಾಸಿನಿ,ಸಾಧ್ಯ ಕೋಕಿಲ,ರಂಗಾಯಣ ರಘು,ನಿಧಿ ಸುಬ್ಬಯ್ಯ
ನಿರ್ದೇಶಕರು – ಪಿ.ವಾಸು
ನಿರ್ಮಾಪಕರು – ದ್ವಾರಕೀಶ್,ಯೋಗೀಶ್ ದ್ವಾರಕೀಶ್ ಬಂಗಲೆ
ಸಂಗೀತ ನಿರ್ದೇಶನ – ಗುರುಕಿರಣ್
ಛಾಯಾಗ್ರಹಣ – ಪಿ.ಕೆ.ಎಚ್ ದಾಸ್
ಸಂಕಲನ – ಗೌತಮ್ ರಾಜ್

ರೇಟಿಂಗ್ – 4/5

ವಿಮರ್ಶೆ

ಒಂದು ಕಡೆ ನಿರ್ದೇಶಕ ಪಿ.ವಾಸು ಮತ್ತು ದ್ವಾರಕೀಶ್ ಅವರ ಜುಗಲ್ಬಂದಿಯ ಚಿತ್ರಗಳು ಬಿಗ್ ಹಿಟ್ ಆದ ಚಿತ್ರಗಳೇ ಮತ್ತೊಂದು ಕಡೆ ಪಿ.ವಾಸು ಮತ್ತು ಶಿವಣ್ಣ ಅವರು ಮಾಡಿದ್ದ ಚಿತ್ರವು ಬಿಗ್ ಹಿಟ್ ಆಗಿತ್ತು ಇದೆಲ್ಲ ಆದಮೇಲೆ ಈ ಮೂವರು ಸೇರಿ ಚಿತ್ರವನ್ನ ಮಾಡುತ್ತಿದ್ದಾರೆ ಆ ಚಿತ್ರದ ಟೈಟಲ್ ಆಯುಷ್ಮಾನ್ ಭವ ಎಂದಾಗ ಕನ್ನಡ ಸಿನಿರಸಿಕರಲ್ಲಿ ಸಹಕವಾಗಿಯೇ ನಿರೀಕ್ಷೆಗಳು ಹೆಚ್ಚಗೆ ಇರುತ್ತವೆ ಆ ನಿರೀಕ್ಷೆಗಳಿಗೆ ಚಿತ್ರ ಹೇಗೆ ಉತ್ತರ ನೀಡಿದೆ ಬನ್ನಿ ಹೇಳುತ್ತೇವೆ,

ಸಾಮಾನ್ಯವಾಗಿ ನಿರ್ದೇಶಕ ಪಿ.ವಾಸು ಅವರ ಚಿತ್ರಗಳು ಹಾರರ್ ಥ್ರಿಲ್ಲರ್ ಅಥವಾ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳೇ ಮತ್ತು ಆಯುಷ್ಮಾನ್ ಭವ ಟ್ರೈಲರ್ ನೋಡಿದಾಗ ಸ್ವಲ್ಪ ಸಸ್ಪೆನ್ಸ್ ಥ್ರಿಲ್ಲರ್ ಅನುಮಾನ ಎಲ್ಲರಲ್ಲೂ ಆದರೆ ನಿಜಕ್ಕೂ ಆಯುಷ್ಮಾನ್ ಭವ ಯಾವುದೇ ಹಾರರ್ ಅಥವಾ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೇ ಅಲ್ಲಾ ಇದೊಂದು ಅಚ್ಚು ಕಟ್ಟಾದ ಫ್ಯಾಮಿಲಿ ಡ್ರಾಮಾ ಎನ್ನಬಹುದು,

ಚಿತ್ರದ ನಾಯಕಿ ರಚಿತಾ ರಾಮ್ ಇಲ್ಲಿ ಒಬ್ಬಳು ದೊಡ್ಡ ಕುಟುಂಬ ಹುಡುಗಿ ಯಾವುದೋ ಕಾರಣದಿಂದ ಅವಳು ಮಾನಸಿಕ ಅಸ್ವಸ್ಥೆಯಾಗಿರುತ್ತಾಳೆ ಇವಳನ್ನ ಚಿತ್ರದ ನಾಯಕ ಮಾಮೂಲಿ ಸ್ಥಿತಿಗೆ ತರುತ್ತಾನೆ ಇದುವೇ ಆಯುಷ್ಮಾನ್ ಭವ ಚಿತ್ರದ ಸಿಂಪಲ್ ಕಥೆಯನ್ನಬಹುದು ಅರೇ ಇಷ್ಟೇನಾ ಅಂತ ನೀವು ಕೇಳಿದರೆ ಖಂಡಿತಾ ತಪ್ಪಾಗುತ್ತದೆ ಚಿತ್ರದ ಚಿತ್ರಕಥೆ ನಿಜಕ್ಕೂ ಚೆನ್ನಾಗಿದೆ ನಾಯಕಿ ಯಾಕೆ ಹುಚ್ಚಿಯಾಗುತ್ತಾಳೆ ನಾಯಕ ಅವಳನ್ನ ಹೇಗೆ ಸರಿ ಮಾಡುತ್ತಾನೆ,ಅವನೇಕೆ ಅವಳನ್ನ ಸರಿ ಮಾಡಬೇಕು ನಾಯಕನ ಹಿನ್ನಲೆ ಏನು ಚಿತ್ರದ ಅಂತ್ಯ ಏನು ಇವೆಲ್ಲವನ್ನು ನೀವು ಚಿತ್ರಮಂದಿರದಲ್ಲೇ ನೋಡಿ ತಿಳಿದುಕೊಳ್ಳಬೇಕು,

ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಥೆಯಿರುವ ಚಿತ್ರಗಳು ಬರುತ್ತಿಲ್ಲ ಅಂತಾ ಹೇಳುವವರಿಗೆ ಈ ಚಿತ್ರ ಖಂಡಿತ ಉತ್ತರವಾಗಿ ನಿಲ್ಲಲಿದೆ ಯಾವುದೇ ಅಳುಕಿಲ್ಲದೆ ಸಂಪೂರ್ಣ ಕುಟುಂಬ ಕೂತು ನೋಡಬಹುದಾದ ಅಚ್ಚುಕಟ್ಟಾದ ಮನರಂಜನಾತ್ಮಕ ಸಿನಿಮಾ ಆಯುಷ್ಮಾನ್ ಭವ,

ಶಿವಣ್ಣ ಇಲ್ಲಿ ಎಲ್ಲರಿಗೂ ಬಹಳ ಇಷ್ಟವಾಗುತ್ತಾರೆ ಅವರ ಪಾತ್ರಕ್ಕೂ ಅಷ್ಟೇ ತೂಕವಿದೆ,
ರಚಿತಾ ರಾಮ್ ಅವರು ಒಂದು ಡಿಫರೆಂಟ್ ರೋಲ್ ಒಪ್ಪಿಕೊಂಡು ನಟಿಸಿ ಗೆದ್ದಿದ್ದಾರೆ ಎನ್ನಬಹುದು,
ಇನ್ನುಳಿದಂತೆ ಬಹುದೊಡ್ಡ ತಾರಾಗಣವೇ ಚಿತ್ರದಲ್ಲಿದೆ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ ಮತ್ತು ಎಲ್ಲರ ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ಇದೇ ಎನ್ನಬಹುದು,

ನಿರ್ದೇಶಕ ಪಿ.ವಾಸು ಅವರು ಹೊಸತನದ ಸಬ್ಜೆಕ್ಟ್ ನಿರ್ದೇಶನ ಮಾಡಿ ಗೆದ್ದಿದ್ದಾರೆ ಬೇರೆಯದೇ ಕಥೆ ಮಾಡಿ ಎಲ್ಲರಿಗೂ ಸರ್ಪ್ರೈಸ್ ಕೂಡ ನೀಡಿದ್ದಾರೆ,
ಸಂಗೀತ ಲೋಕದ ದಿಗ್ಗಜ ಗುರುಕಿರಣ್ ಅವರ ಸಂಗೀತ ನಿರ್ದೇಶನದ 100 ನೇ ಸಿನಿಮಾ ಈ ಆಯುಷ್ಮಾನ್ ಭವ ಇದರಲ್ಲಿನ ಎಲ್ಲಾ ಹಾಡುಗಳು ಮತ್ತು ಹಿನ್ನಲೆ ಸಂಗೀತ ಎರಡು ಬಹಳ ಚೆನ್ನಾಗಿದೆ,

ದ್ವಾರಕೀಶ್ ಬ್ಯಾನರ್ ನ ಚಿತ್ರಗಳು ಎಂದರೆ ಖಂಡಿತ ಅದು ಬಹಳ ಚೆನ್ನಾಗಿ ಮೇಕಿಂಗ್ ಮಾಡಿರುವ ಚಿತ್ರವಾಗಿರುತ್ತದೆ ಮತ್ತು ಗಟ್ಟಿ ಕಥೆ ಕೂಡ ಇರುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಆಯುಷ್ಮಾನ್ ಭವ ಚಿತ್ರ ಈ ವರ್ಷದ ಬಿಗ್ಗೆಸ್ಟ್ ಫ್ಯಾಮಿಲಿ ಎಂಟಟೈನರ್ ಆಗುವುದರಲ್ಲಿ ಅನುಮಾನವೇ ಬೇಡ ಮಿಸ್ ಮಾಡದೆ ಎಲ್ಲರೂ ನಿಮ್ಮ ಕುಟುಂಬ ಸಮೇತರಾಗಿ ಚಿತ್ರವನ್ನ ನೋಡಿ ಆನಂದಿಸಿ.

Leave a Reply