ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭಾವಂತ ಕಲಾವಿದರು,ತಂತ್ರಜ್ಞರ ಚಿತ್ರಗಳು ವಾರ ವಾರವೂ ಒಂದಿಲ್ಲೊಂದು ಚಿತ್ರಗಳು ಬಿಡುಗಡೆಯಾಗುತ್ತಲೆ ಇರುತ್ತವೆ ಈ ವಾರ ಅಂತಹುದೇ ಹೊಸ ತಂಡದ ಭರವಸೆಯ ಚಿತ್ರವೊಂದು ಬಿಡುಗಡೆಯಾಗುತ್ತಿದೆ,

ರಾಜಲಕ್ಷ್ಮೀ ಚಿತ್ರ ಈ ವಾರ ಬಿಡುಗಡೆಯಾಗುತ್ತಿರುವ ನವ ಪ್ರತಿಭೆಗಳ ಸಿನಿಮಾ ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಸಿನಿರಸಿಕರ ಮನವನ್ನ ಗೆದ್ದಿರುವುದು ಚಿತ್ರದ ಮೇಲೆ ಎಲ್ಲರಿಗೂ ಒಂದು ಮಟ್ಟಿಗೆ ನಿರೀಕ್ಷೆ ಇಡುವಂತೆ ಮಾಡಿದೆ,

ಮೋಹನ್ ಕುಮಾರ್ ಎಸ್.ಕೆ ಅವರ ನಿರ್ಮಾಣ ಕಾಂತರಾಜು ಅವರ ನಿರ್ದೇಶನದಲ್ಲಿ ನವೀನ್ ತೀರ್ಥಹಳ್ಳಿ ಮತ್ತು ರಶ್ಮಿ ಗೌಡ ಅವರು ಜೋಡಿಯಾಗಿ ನಟಿಸಿದ್ದು ರಾಜಲಕ್ಷ್ಮೀಯಾಗಿ ಮಿಂಚಿದ್ದಾರೆ ಇನ್ನು ಈ ಚಿತ್ರಕ್ಕೆ ರವೀಶ್ ಅವರ ಸಂಗೀತ ನಿರ್ದೇಶನವಿದ್ದು ಹಾಡುಗಳು ಕೇಳಲು ಚೆನ್ನಾಗಿವೆ,

ರಾಜಲಕ್ಷ್ಮೀ ಸಿನಿಮಾ ಹಳ್ಳಿ ಸೊಗಡಿನ ನವಿರಾದ ಪ್ರೇಮಕಥೆಯನ್ನ ಒಳಗೊಂಡಿದ್ದು ಪಕ್ಕಾ ಮನರಂಜನಾತ್ಮಕ ಚಿತ್ರಕಥೆಯನ್ನ ಒಳಗೊಂಡಿದೆ ಖಂಡಿತ ಈ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರು ಇಷ್ಟಪಡುವಂತಹ ಚಿತ್ರವಾಗಬಹುದು ಕಾಯುತ್ತಿರಿ ಇದೇ 22 ರಂದು ರಾಜಲಕ್ಷ್ಮೀ ಸಿನಿಮಾ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ

Leave a Reply