ನಮ್_ಟಾಕೀಸ್.ಇನ್ ವಿಮರ್ಶೆ ಮತ್ತು ರೇಟಿಂಗ್

ಚಿತ್ರ – ದಮಯಂತಿ
ತಾರಾಗಣ – ರಾಧಿಕಾ ಕುಮಾರಸ್ವಾಮಿ,ತಬಲ ನಾಣಿ, ಮಿತ್ರ, ಶರಣ, ಗಿರಿ, ಮಜಾ ಟಾಕೀಸ್ ಪವನ್, ಅನುಷಾ ರೈ ಹಾಗೂ ನಕ್ಷತ್ರ
ನಿರ್ದೇಶಕರು – ನವರಸನ್
ಸಂಗೀತ ನಿರ್ದೇಶಕರು – ಆರ್.ಎಸ್.ಗಣೇಶ್ ನಾರಾಯಣ್

ರೇಟಿಂಗ್ – 3.5 /5

ವಿಮರ್ಶೆ 👇

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹೈ ಕ್ವಾಲಿಟಿ ಸಿನಿಮಾಗಳು ಪ್ಯಾನ್ ಇಂಡಿಯಾ ಮೂವಿಗಳು ಬರುತ್ತಿವೆ ಈ ಸಾಲಿಗೆ ಸೇರ್ಪಡೆಯಾಗಿದ್ದ ದಮಯಂತಿ ಸಿನಿಮಾ ಬಹಳ ನಿರೀಕ್ಷೆಗಳನ್ನ ಇಟ್ಟುಕೊಂಡು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿತ್ತು ಬನ್ನಿ ಚಿತ್ರದ ಹೇಗಿದೆ ಎಂದು ತಿಳಿಯೋಣ,

ದಮಯಂತಿ ಚಿತ್ರದ ಮೇಲೆ ಬಹಳ ನಿರೀಕ್ಷೆಗಳು ಬರಲು ಕಾರಣಗಳು ಒಂದು ರಾಧಿಕಾ ಕುಮಾರಸ್ವಾಮಿ ಕಂಬ್ಯಾಕ್ ಸಿನಿಮಾ ಮತ್ತೊಂದು ಪ್ಯಾನ್ ಇಂಡಿಯಾ ಮೂವಿ ಬಹಳ ರಿಚ್ ಮೇಕಿಂಗ್ ಮಾಡಿರುವ ಕ್ವಾಲಿಟಿ ಸಿನಿಮಾ,
ಚಿತ್ರದ ಟ್ರೈಲರ್ ಮತ್ತು ಪೋಸ್ಟರ್ ಗಳನ್ನ ನೋಡಿದರೆ ಎಲ್ಲರಿಗೂ ತಿಳಿದುಬಿಡುತ್ತದೆ ಇದೊಂದು ಪಕ್ಕಾ ಹಾರರ್ ಸಿನಿಮಾ ಅಂತಾ ಆದರೆ ಈ ಚಿತ್ರದಲ್ಲಿ ಹಾರರ್ ಅಂಶಕ್ಕಿಂತ ಕಾಮಿಡಿ ಅಂಶವೇ ಜಾಸ್ತಿ ಇರುವುದು ನಿಜಕ್ಕೂ ಪ್ರೇಕ್ಷಕರಿಗೆ ಅಚ್ಚರಿ ತಂದಿದೆ ಮತ್ತು ಖುಷಿ ಕೂಡ ನೀಡಿದೆ,

ದಮಯಂತಿ ಚಿತ್ರದ ಕಥೆಯ ವಿಷಯಕ್ಕೆ ಬಂದರೆ ಒಬ್ಬ ವ್ಯಕ್ತಿ ಬಹಳ ಸಾಲ ಮಾಡಿರುತ್ತಾನೆ ಅವನ ಮಗ ಟಿ.ವಿ.ಚಾನೆಲ್ ನಲ್ಲಿ ಕೆಲಸ ಮಾಡುತ್ತಿರುತ್ತಾನೆ ದುಡಿದ ದುಡ್ಡೇಲ್ಲಾ ಅಪ್ಪನ ಸಾಲ ತೀರಿಸಲು ಸರಿ ಹೋಗುತ್ತಿರುತ್ತದೆ ಅವನ ಅಪ್ಪ ಸಾಲ ಮಾಡಲು ಕಾರಣ ಒಂದು ಭೂತ ಬಂಗಲೆ ಅದನ್ನ ಹೇಗಾದರೂ ಮಾಡಿ ಒಂದು ದೊಡ್ಡ ಮೊತ್ತಕೆ ಮಾರಾಟ ಮಾಡುವುದು ಅವನ ಉದ್ದೇಶ,

ಈ ಉದ್ದೇಶದಿಂದ ಒಂದು ಸುಳ್ಳಾದ ಡಿಡಿ ಬಾಸ್ ಎನ್ನುವ ಹಾರರ್ ರಿಯಾಲಿಟಿ ಶೋ ಒಂದನ್ನ ಸೃಷ್ಟಿ ಮಾಡಿ 6 ಜನ ಸ್ಪರ್ಧಿಗಳನ್ನ ಮನೆಯೊಳಗೆ ಕಳುಹಿಸಿ ನೀವು ಮನೆಯ ಒಳಗಡೆ ದೆವ್ವ ನೋಡಿದರೆ ಹೆದರಬೇಡಿ ಅದು ನಮ್ಮ ಆರ್ಟಿಸ್ಟ್ ಗಳು ಆದರೂ ನೀವು ಹೆದರಿದರೆ ಹೊರಬರುತ್ತೀರಿ ಎಂದು ಸುಳ್ಳು ಹೇಳಿರುತ್ತಾನೆ ಇಲ್ಲಿಂದ ನೋಡಿ ಚಿತ್ರದಲ್ಲಿ ಬಹಳ ಮಜಾ ಬರುವುದು,

ನಂತರ ಚಿತ್ರದಲ್ಲಿ ನಿಜವಾದ ದೆವ್ವ ಎಂಟ್ರಿ ಕೊಡುತ್ತಾಳೆ ಅವಳೇ ದಮಯಂತಿ ಆದರೂ ಇವಳನ್ನ ನೋಡಿದರು ಆ 6 ಜನ ಸ್ಪರ್ಧಿಗಳು ಹೆದರುವುದಿಲ್ಲಾ ಅವಳನ್ನೇ ಕೀಟಲೆ ಮಾಡಿ ಓಡಿಸುತ್ತಿರುತ್ತಾರೆ,
ಮುಂದೆ ದಮಯಂತಿ ಆ 6 ಜನಕ್ಕೆ ಏನು ಮಾಡುತ್ತಾಳೆ ಆ ಭೂತ ಬಂಗಲೆಯ ಹಿನ್ನಲೆ ಏನು ದಮಯಂತಿ ಪ್ರೇತಾತ್ಮವಾಗಲು ಕಾರಣವೇನು ಕೊನೆಗೆ ಚಿತ್ರದ ಅಂತ್ಯವೇನು ಎಂಬುದೇ ಚಿತ್ರದ ಬಹಳ ಥ್ರಿಲ್ಲರ್ ಕಥೆ ಇದನ್ನ ನೀವು ಚಿತ್ರಮಂದಿರದಲ್ಲೇ ನೋಡಿ ಆನಂದಿಸಬೇಕು,

ಇನ್ನು ನಟನೆಯ ವಿಷಯಕ್ಕೆ ಬಂದರೆ ರಾಧಿಕಾ ಕುಮಾರಸ್ವಾಮಿ ಅವರು ಅದ್ಭುತವಾಗಿ ಕಂಬ್ಯಾಕ್ ಮಾಡಿದ್ದಾರೆ ಚಿತ್ರದಲ್ಲಿನ ಎರಡು ಶೇಡ್ ಗಳಲ್ಲಿ ಮನೋಘ್ನ ಅಭಿನಯ ನೀಡಿದ್ದಾರೆ,
6 ಜನ ಸ್ಪರ್ಧಿಗಳಾಗಿ ತಬಲ ನಾಣಿ, ಮಿತ್ರ, ಶರಣ, ಗಿರಿ, ಮಜಾ ಟಾಕೀಸ್ ಪವನ್, ಅನುಷಾ ರೈ ಹಾಗೂ ನಕ್ಷತ್ರ ಪ್ರೇಕ್ಷಕರನ್ನ ಸಾಕಷ್ಟು ನಗಿಸುತ್ತಾರೆ,

ನವರಸನ್ ಅವರ ನಿರ್ದೇಶನ ಚಿತ್ರಕ್ಕೆ ಬಹುದೊಡ್ಡ ಪ್ಲಸ್ ಪಾಯಿಂಟ್ ಎನ್ನಬಹುದು,
ಪಿ.ಕೆ.ಎಚ್ ದಾಸ್ ಅವರ ಛಾಯಾಗ್ರಹಣ ಇಡೀ ಚಿತ್ರವನ್ನ ರಿಚ್ ಆಗಿ ತೋರಿಸುತ್ತದೆ,
ಆರ್.ಎಸ್.ಗಣೇಶ್ ನಾರಾಯಣ್ ಸಂಗೀತ ಮತ್ತು ಮಹೇಶ್ ರೆಡ್ಡಿ ಸಂಕಲನ ಚಿತ್ರಾಂಕ್ ಪೂರಕವಾಗಿದೆ,

ಒಟ್ಟಾರೆ ಹೇಳಬೇಕು ಎಂದರೆ ಸಂಪೂರ್ಣ ಫ್ಯಾಮಿಲಿ ಕೂತು ನೋಡಬಹುದಾದ ಸಿನಿಮಾ ದಮಯಂತಿ ನಿಮಗೆ ಸಾಕಷ್ಟು ಮನರಂಜನೆ ನೀಡುತ್ತಾಳೆ ಮಿಸ್ ಮಾಡದೆ ನೋಡಿ ಆನಂದಿಸಿ

Leave a Reply