ನಮ್_ಟಾಕೀಸ್.ಇನ್ ವಿಮರ್ಶೆ ಮತ್ತು ರೇಟಿಂಗ್

ಚಿತ್ರ – ಆ ದೃಶ್ಯ
ನಿರ್ಮಾಪಕರು – ಕೆ.ಮಂಜು
ನಿರ್ದೇಶಕರು – ಶಿವ ಗಣೇಶ್
ತಾರಾಗಣ – ಡಾ.ವಿ ರವಿಚಂದ್ರನ್,ಅಚ್ಯುತ್ ಕುಮಾರ್,ರಮೇಶ್ ಭಟ್
ಛಾಯಾಗ್ರಹಣ – ವಿನೋದ್ ಭಾರತಿ ಎ
ಸಂಗೀತ ನಿರ್ದೇಶನ – ಗೌತಮ್ ಶ್ರೀವತ್ಸ

ರೇಟಿಂಗ್ : 4/5

ವಿಮರ್ಶೆ

ಕ್ರೇಜಿಸ್ಟಾರ್ ಅಂದರೆ ಲವರ್ ಬಾಯ್ ಅನ್ನುವಷ್ಟು ಬ್ರಾಂಡ್ ಆಗಿದ್ದ ಡಾ.ವಿ.ರವಿಚಂದ್ರನ್ ಅವರನ್ನ ಹೀಗೂ ನೋಡಬಹುದು ಇಂತಹ ಪಾತ್ರದಲ್ಲೂ ಅವರು ನಟಿಸಿ ಚಿತ್ರವನ್ನ ಗೆಲ್ಲಿಸಬಹುದು ಎಂಬುದನ್ನ ತೋರಿಸಿದ ಸಿನಿಮಾ ದೃಶ್ಯ,
ಈ ಚಿತ್ರದ ನಂತರ ರವಿಮಾಮ ಎಲ್ಲಾ ತರಹದ ಪಾತ್ರಗಳಲ್ಲೂ ನಟಿಸಲು ಶುರು ಮಾಡಿದರು,

ಕ್ರೇಜಿಸ್ಟಾರ್ ಇದೀಗ ಮತ್ತೊಂದು ವಿಭಿನ್ನವಾದ ಪಾತ್ರದಲ್ಲಿ ನಟಿಸಿರುವ ಆ ದೃಶ್ಯ ಸಿನಿಮಾ ತೆರೆಕಂಡು ಒಳ್ಳೆಯ ಒಪೆನಿಂಗ್ ಕೂಡ ಪಡೆದುಕೊಂಡಿದೆ ಈ ಚಿತ್ರದಲ್ಲಿ ಅವರು ವಾಕಿಂಗ್ ಸ್ಟಿಕ್ ಇಡಿದುಕೊಂಡು ಸ್ವಲ್ಪ ವಯಸ್ಸಾದ ಪಾತ್ರದ ಜೊತೆ ಯಂಗ್ ಆಗಿ ಪೊಲೀಸ್ ಪಾತ್ರದಲ್ಲೂ ನಟಿಸಿದ್ದಾರೆ ಅವರ ಮನೋಘ್ನ ಅಭಿನಯ ಇಡೀ ಚಿತ್ರದ ದೊಡ್ಡ ಹೈಲೈಟ್,

ಆ ದೃಶ್ಯ ಚಿತ್ರವು ದೃಶ್ಯ ಚಿತ್ರದ ಹಾಗೆ ಬಹಳಷ್ಟು ರೋಚಕ ಅಂಶಗಳನ್ನ ಒಳಗೊಂಡಿದ್ದು ಮರ್ಡರ್ ಮಿಸ್ಟರಿ ಕಥೆಯನ್ನ ಹೇಳುತ್ತದೆ ಕೊಲೆಗಾರನ ಬೆನ್ನತ್ತುವ ಆಫೀಸರ್ ರವಿಮಾಮ ಆ ಕೊಲೆಗಾರನನ್ನ ಹೇಗೆ ಪತ್ತೆ ಹಚ್ಚುತ್ತಾರೆ ಅನ್ನುವುದೇ ಚಿತ್ರಕಥೆ,

ಚಿತ್ರದಲ್ಲಿ ನಟಿಸಿರುವ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ ಇಡೀ ಚಿತ್ರವನ್ನ ಜಿಗರ್ ಥಂಡ ಖ್ಯಾತಿಯ ನಿರ್ದೇಶಕ ಶಿವಗಣೇಶ್ ಅವರು ಬಹಳ ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ ಪ್ರಾರಂಭದಿಂದ ಅಂತ್ಯದ ತನಕವೂ ಸೀಟಿನ ತುದಿಯಲ್ಲೇ ಕೂತು ನೋಡುವಂತಹ ಥ್ರಿಲ್ಲಿಂಗ್ ಸಿನಿಮಾ ಆ ದೃಶ್ಯ,

ಗಂಡುಗಲಿ ಕೆ.ಮಂಜು ಅವರು ನಿಜಕ್ಕೂ ಒಂದೊಳ್ಳೆಯ ಕಥೆಯಿರುವ ಚಿತ್ರವನ್ನ ಆಯ್ಕೆ ಮಾಡಿ ನಿರ್ಮಾಣ ಮಾಡಿದ್ದಾರೆ ಇಂತಹ ಚಿತ್ರಗಳು ನಮ್ಮ ಕನ್ನಡ ಸಿನಿರಸಿಕರಿಗೆ ಬೇಕು,
ಚಿತ್ರದಲ್ಲಿನ ತಾಂತ್ರಿಕತೆ ಬಹಳ ಚೆನ್ನಾಗಿದೆ ಇದುವೇ ಚಿತ್ರದ ಮೇಜರ್ ಪ್ಲಸ್ ಪಾಯಿಂಟ್,

ಒಟ್ಟಾರೆ ಹೇಳಬೇಕು ಎಂದರೆ ಆ ದೃಶ್ಯ ಮನೆಮಂದಿಯಲ್ಲಾ ಕೂತು ನೋಡಬಹುದಾದ ಸಿನಿಮಾ ಇಲ್ಲಿ ನಿಮಗೆ ಇರಿಟೇಟ್ ಮಾಡಲು ಮದ್ಯ ಮದ್ಯ ಹಾಡುಗಳು ಸಹ ಬರುವುದಿಲ್ಲಾ ಫಿನಿಷಿಂಗ್ ಟಚ್ ಗೆ ಒಂದು ಹಾಡು ಮಾತ್ರ ಕೊನೆಯಲ್ಲಿ ಬರುತ್ತದೆ ಇದರಿಂದ ಚಿತ್ರದ ರೋಚಕಥೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಮಿಸ್ ಮಾಡದೆ ಇಂತಹ ಅದ್ಬುತ ಚಿತ್ರವನ್ನ ನೋಡಿ ಆನಂದಿಸಿ.

 

Leave a Reply