ಸ್ಯಾಂಡಲ್ ವುಡ್ ಮಾರ್ಕೆಟ್ ಇದೀಗ ಬೆಳೆದಿದೆ ನಮಲ್ಲೂ 100 ಕೋಟಿ ಕಲೆಕ್ಷನ್ ಮಾಡಬಹುದು ಎಂದು ಕೆಜಿಎಫ್,ಕುರುಕ್ಷೇತ್ರ ಮತ್ತು ಪೈಲ್ವಾನ್ ಚಿತ್ರಗಳು ತೋರಿಸಿಕೊಟ್ಟಿವೆ ಮುಂದೆ ಬರಲಿರುವ ಮತ್ತಷ್ಟು ಕನ್ನಡ ಚಿತ್ರಗಳಿಗಾಗಿ ಇಡೀ ಭಾರತದಲ್ಲೇ ಸಿನಿರಸಿಕರು ಕಾಯುತ್ತಿದ್ದಾರೆ ಅದರಲ್ಲಿ ಪ್ರಮುಖವಾದ ಸಿನಿಮಾ ಅವನೇ ಶ್ರೀಮನ್ನಾರಾಯಣ,

ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವತ್ಸ ಅವರು ಜೋಡಿಯಾಗಿ ನಟಿಸಿರುವ ಅವನೇ ಶ್ರೀಮನ್ನಾರಾಯಣ ಚಿತ್ರವನ್ನ ಸಚಿನ್ ಅವರು ನಿರ್ದೇಶನ ಮಾಡಿದ್ದಾರೆ ಚಿತ್ರದ ಟ್ರೈಲರ್ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಬಹಳ ಸೌಂಡ್ ಮಾಡಿತ್ತು ಮತ್ತು ಚಿತ್ರದ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿತ್ತು,

ಇತ್ತೀಚಿಗೆ ಬಿಡುಗಡೆಯಾದ ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸಪ್ ಹಾಡು ಇದೀಗ ಎಲ್ಲೆಡೆ ಟ್ರೆಂಡ್ ಆಗಿದ್ದು ಹ್ಯಾಂಡ್ಸಪ್ ಸ್ಟೆಪ್ಸ್ ಚಾಲೆಂಜ್ ಎಲ್ಲಾ ಕಡೆ ವೈರಲ್ ಆಗುತ್ತಿದೆ ಇದರಿಂದ ಚಿತ್ರದ ಬಗೆಗಿನ ನಿರೀಕ್ಷೆಗಳು ಹೆಚ್ಚಾಗುತ್ತಲೇ ಇದಾವೆ ಹಲವಾರು ಸೆಲೆಬ್ರಿಟಿಗಳು ಈ ಹ್ಯಾಂಡ್ಸಪ್ ಚಾಲೆಂಜ್ ಸ್ವೀಕರಿಸಿ ಸ್ಟೆಪ್ಸ್ ಆಗಿದ್ದು ಎಲ್ಲಾ ವಿಡಿಯೋ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ,

ಇದೇ 27 ರಂದು ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಯಾಗುತ್ತಿದೆ ಈಗಾಗಲೇ ಚಿತ್ರಮಂದಿರಗಳ ಪಟ್ಟಿ ಕೂಡ ಬಿಡುಗಡೆಯಾಗಿದ್ದು ಹಲವಾರು ಕಡೆ ಬುಕಿಂಗ್ಸ್ ಕೂಡ ತೆರೆದಿದೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು ಕಲೆಕ್ಷನ್ ಯಾವ ರೀತಿ ಆಗಲಿದೆ ನೋಡಬೇಕು ಖಂಡಿತ ಇದು ಕನ್ನಡ ಚಿತ್ರರಂಗದ ಹಳೆಯ ಎಲ್ಲಾ ದಾಖಲೆಗಳನ್ನ ಮೀರಿಸುವ ಚಿತ್ರವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಕಾಯುತ್ತಿರಿ

Leave a Reply