ಕೆ.ಎಂ.ಚೈತನ್ಯ ಅವರ ನಿರ್ದೇಶನದ ಯೋಗೀಶ್ ದ್ವಾರಕೀಶ್ ಅವರ ನಿರ್ಮಾಣದಲ್ಲಿ ಯುವ ಸಾಮ್ರಾಟ್ ಚಿರು ಸರ್ಜಾ,ಸಿತಾರ ಮತ್ತು ನಿಷ್ವಿಕಾ ನಾಯ್ಡು ನಟಿಸಿರುವ #ಅಮ್ಮ_ಐಲವ್_ಯು ಕಳೆದ ಶುಕ್ರವಾರ ರಾಜ್ಯಾದ್ಯಂತ ತೆರೆಕಂಡು ಬಾರಿ ಜನಮನ್ನಣೆ ಗಳಿಸಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಒಳ್ಳೆಯ ಅಭಿಪ್ರಾಯ ಪಡೆದುಕೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ,

ಇದರಿಂದ ಬಹಳಷ್ಟು ಖುಷಿಯಾಗಿರುವ ಚಿತ್ರತಂಡ ನೆನ್ನೆ ಸೆಲೆಬ್ರಿಟಿ ಷೋ ಆಯೋಜನೆ ಮಾಡಿತ್ತು ಆ ಷೋ ನೋಡಲು ಲವ್ಲಿ ಸ್ಟಾರ್ ಪ್ರೇಮ್ ಮತ್ತು ಅವರ ಪತ್ನಿ, ಟಿ.ಎನ್.ಸೀತಾರಾಮ್,ವಸಿಷ್ಠ ಸಿಂಹ,ಮೇಘನಾ ರಾಜ್,ದಿನಕರ್ ತೂಗುದೀಪ,ಕವಿರಾಜ್,ಪನ್ನಗ ನಾಗಾಭರಣ,ದಯಾಳ್ ಪದ್ಮನಾಭನ್,ಭಾವನಾ ರಾವ್,ಸಂಯುಕ್ತ ಹೊರನಾಡ್ ಮತ್ತು ಅವರ ಅಮ್ಮ ಮತ್ತು ಇನ್ನು ಮುಂತಾದ ಹಲವಾರು ಸೆಲೆಬ್ರಿಟಿಗಳು ಬಂದು ಅಮ್ಮ ಐ ಲವ್ ಯು ಚಿತ್ರವನ್ನ ನೋಡಿದರು.

ಚಿತ್ರವನ್ನ ನೋಡಿದ ಎಲ್ಲಾ ಸೆಲೆಬ್ರಿಟಿಗಳು ಚಿತ್ರವನ್ನ ಬಹಳಷ್ಟು ಮೆಚ್ಚಿಕೊಂಡಿದ್ದಾರೆ ಇದರಿಂದ ಚಿತ್ರತಂಡದ ಖುಷಿ ಮತ್ತಷ್ಟು ಹಿಮ್ಮಡಿಯಾಗಿದೆ ಎಲ್ಲರಿಂದ ಅದ್ಬುತ ಪ್ರತಿಕ್ರಿಯೆ ಬಂದಿರುವುದು ಸಹಜವಾಗಿಯೇ ಕಷ್ಟ ಪಟ್ಟು ಸಿನಿಮಾ ಮಾಡಿದ್ದ ಚಿತ್ರತಂಡಕ್ಕೆ ಸಂತೋಷ ಆಗಲೇಬೇಕು.

ಇನ್ನು ಅಮ್ಮ ಐಲವ್ ಯು ಚಿತ್ರ ಅಮ್ಮ ಮಗನ ಪ್ರೀತಿ ವಾತ್ಸಲ್ಯ ತ್ಯಾಗಗಳ ಸುತ್ತಾ ಸಾಗುವ ಎಮೋಷನಲ್ ಕಥೆಯಾದ್ದರಿಂದ ಸಂಪೂರ್ಣ ಕುಟುಂಬ ಕೂತು ನೋಡಬಹುದು ಆದರಿಂದ ಮಿಸ್ ಮಾಡದೆ ಇಂದೇ ಹೋಗಿ ನೋಡಿ ಆನಂದಿಸಿ.

Leave a Reply