ಸ್ಯಾಂಡಲ್ ವುಡ್ ‘ಯಜಮಾನ’,ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ರವರ ಹುಟ್ಟುಹಬ್ಬಕ್ಕೆ ಕೌಂಟ್ ಡೌನ್ ಶುರುಯಾಗಿದೆ‌.ಇದೇ ಫೆಬ್ರವರಿ 16 ರಂದು ಡಿ ಬಾಸ್ ದರ್ಶನ್ ತಮ್ಮ 42ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಳ್ಳಲಿದ್ದಾರೆ.

ರೆಬಲ್ ಸ್ಟಾರ್ ನಟ ಅಂಬರೀಶ್ ನಿಧನದಿಂದ
ಹುಟ್ಟು ಹಬ್ಬ ಆಚರಿಸಿಕೊಳ್ಳಲ್ಲ ಹೇಳಿದ ದರ್ಶನ್ ಅಭಿಮಾನಿಗಳಿಗಾಗಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ‌.ಪ್ರತಿಬಾರಿಯಂತೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಕಣ್ಣುತುಂಬಿಕೊಳ್ಳುವ ಅಭಿಮಾನಿಗಳು ಈ ಬಾರಿಯೂ ಮುಂಚಿತವಾಗಿಯೇ ಸಂಭ್ರಮಕ್ಕೆ ರೆಕ್ಕೆಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್‌ ನಟರ ಹುಟ್ಟು ಹಬ್ಬದ ಕ್ರೇಜ್ ದರ್ಶನ್ ಅಭಿಮಾನಿಗಳಲ್ಲಿ ತುಸು ಹೆಚ್ಚೇ‌.ಕಳೆದ ವರ್ಷ ಡಿ.ಉತ್ಸವವನ್ನು ಮಾಡಿ ಚಾಲೆಂಜಿಂಗ್ ಸ್ಟಾರ್ ಹುಟ್ಟು ಹಬ್ಬ ಆಚರಿಸಿಕೊಂಡ ಅಭಿಮಾನಿಗಳು ಈ ಬಾರಿ ‘ಬಾಸ್ ಪರ್ವ’, ‘ಸುಲ್ತಾನ್ ಸಂಭ್ರಮ’ ಹೀಗೆ ಯಜಮಾನನ ಹುಟ್ಟು ಹಬ್ಬದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ ಅಭಿಮಾನಿಗಳು.

ಈ ಬಾರಿ ಡಿ.ಕಂಪನಿ(ರಿ.) ಎನ್ನುವ ದರ್ಶನ್ ಅಭಿಮಾನಿ ಸಂಘ ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಾಕಿರುವ ‘ಕಾಮನ್ ಡೀಪಿ’ಚಾಲೆಂಜ್ ಎಲ್ಲಾ ಅಭಿಮಾನಿ ಬಳಗದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ.ನೂರು ದಿನದಂದ ತನ್ನ ಮೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಕೌಂಟ್ ಡೌನ್ ಮಾಡುತ್ತಾ ಬರುತ್ತಿರುವ ಅಭಿಮಾನಿಗಳು ದಿನಕ್ಕೊಂದು ಹೊಸ ಪ್ರೊಫೈಲ್ ಪಿಕ್ಚರ್ ಅನ್ನು ಹಾಕಿ ಡಿ.ಬಾಸ್ ಗೆ ಸರ್ ಪ್ರೈಸ್ ಕೊಟ್ಟಿದ್ದಾರೆ.

ಸ್ಟಾರ್ ಗಳು ಹುಟ್ಟುಹಬ್ಬವನ್ನು ಆಚರಣೆ ಮಾಡಿ ಜನಮೆಚ್ಚುವ ಕಾರ್ಯವನ್ನು ಮಾಡಿ ಮನೋರಂಜನೆಯೊಂದಿಗೆ ಮಾನವೀಯತೆಯ ಮೌಲ್ಯವನ್ನು ಸಾರುವ ಕೆಲಸವನ್ನು ಮಾಡುವುದು ಸಾಮಾನ್ಯ.ಈ ಕಾಯಕದಲ್ಲಿ ದರ್ಶನ್ ರವರು ಹೊರತಾಗಿಲ್ಲ.ಈ ಬಾರಿಯೂ ಅನಾಥ ಆಶ್ರಮಕ್ಕೆ ಸಹಾಯ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದರ ಜೊತೆಗೆ ಸಿದ್ದಗಂಗಾ ಶ್ರೀ ಮಠಕ್ಕೆ ಸಹಾಯ ಜೊತೆಗೆ ಅನ್ನದಾನ ,ರಕ್ತದಾನದಂತಹ ಪುಣ್ಯಕಾರ್ಯಕ್ಕೆ ಸಾಕ್ಷಿಯಾಗಲಿದೆ ಈ ಬಾರಿಯ ಬಾಸ್ ಪರ್ವ.

ಇನ್ನುಳಿದಂತೆ ಈ ಬಾರಿ ದರ್ಶನ್ ಹುಟ್ಟು ಹಬ್ಬಕ್ಕೆ ಖ್ಯಾತ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ರವರು ಹಾಡೊಂದನ್ನು ‌ರಚಿಸಿ ದರ್ಶನ್ ರವರಿಗೆ ಅರ್ಪಿಸಲಿದ್ದಾರೆ.ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ದರ್ಶನ್ ರವರ ಯಜಮಾನ ಚಿತ್ರದ ಟ್ರೇಲರ್ ಅನ್ನು ಚಿತ್ರ ತಂಡ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.ಸ್ಯಾಂಡಲ್ ವುಡ್ ಬಿಗ್ ಬಜೆಟ್ ಚಿತ್ರ ಎಂದು ಸದ್ದಾಗುತ್ತಿರುವ ರಾಕ್ ಲೈನ್ ವೆಂಕಟೇಶ್ ಸಾರಥ್ಯದ ಚಿತ್ರ ಮದಕರಿ ಚಿತ್ರದ ಮುಹೂರ್ತ ನಡೆಯಲಿದೆ.

ಚಾಲೇಜಿಂಗ್ ಸ್ಟಾರ್ ದರ್ಶನ್ ರ ಮುಂಬರುವ 50ನೇ ಚಿತ್ರ ಮತ್ತು ಬಿಗ್ ಬಜೆಟ್ ಮೂವಿ ಕುರುಕ್ಷೇತ್ರ, ರಾಬರ್ಟ್ ಹಾಗೂ ಒಡೆಯ ಚಿತ್ರ ತಂಡಗಳು ‌ಟೈಟಲ್ ಪೋಸ್ಟರ್ ಮತ್ತು ವಿಶೇಷವಾದ ಉಡುಗೊರೆ ನೀಡುವ ತಯಾರಿ ಅಲ್ಲಿದೆ.

 

 

One Comments

  • AshaArun 06 / 02 / 2019 Reply

    God bless

Leave a Reply